ಆಲ್ಬರ್ಟ್ ರೋಕಾ ನೇತೃತ್ವದ ಬಿಎಫ್'ಸಿ ತವರಿನ ಅಭಿಮಾನಿಗಳಿಗೆ ಮತ್ತೊಮ್ಮೆ ಜಯದ ಸಿಹಿಯುಣಿಸಲು ಸಜ್ಜಾಗಿದೆ.

ಬೆಂಗಳೂರು(ಆ.23): ಎಎಫ್‌'ಸಿ ಕಪ್ ಅಂತರ ವಲಯ ಸೆಮಿಫೈನಲ್‌'ನಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡವು ಏಪ್ರಿಲ್ 25ರಂದು ಉತ್ತರ ಕೊರಿಯಾದ ತಂಡದ ಸವಾಲನ್ನು ಎದುರಿಸಲಿದೆ.

ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಬಿಎಫ್‌'ಸಿ ತವರಿನಲ್ಲಿ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ. ಬಿಎಫ್‌'ಸಿ ಕಂಠೀರವದಲ್ಲಿ ಕಳೆದ 7 ಪಂದ್ಯಗಳಲ್ಲಿ ಸೋಲೇ ಕಂಡಿಲ್ಲ. ಬಿಎಫ್‌'ಸಿ ಗೆದ್ದರೆ, ಅಂತರ ವಲಯ ಫೈನಲ್ ಪ್ರವೇಶಿಸಲಿದೆ. ಅಲ್ಲಿ ಗೆದ್ದರೆ ಗ್ರಾಂಡ್'ಫಿನಾಲೆಯಲ್ಲಿ ಪಶ್ಚಿಮ ಏಷ್ಯಾ ವಲಯದ ಫೈನಲ್‌'ನಲ್ಲಿ ಸೆಣಸಲಿರುವ ಇರಾಕ್‌'ನ ಏರ್'ಫೋರ್ಸ್ ಕ್ಲಬ್ ಹಾಗೂ ಸಿರಿಯಾದ ಅಲ್'ವಹ್ದಾ ನಡುವಿನ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಎದುರಿಸಲಿದೆ.

ಆಲ್ಬರ್ಟ್ ರೋಕಾ ನೇತೃತ್ವದ ಬಿಎಫ್'ಸಿ ತವರಿನ ಅಭಿಮಾನಿಗಳಿಗೆ ಮತ್ತೊಮ್ಮೆ ಜಯದ ಸಿಹಿಯುಣಿಸಲು ಸಜ್ಜಾಗಿದೆ.