ಅಂಡರ್ 19 ಕ್ರಿಕೆಟ್'ನಲ್ಲಿ ಅಪ್ರತಿಮ ಸಾಧನೆ, 2016ರ ರಣಜಿ ಋತುವಿನಲ್ಲಿ ಈತನದ್ದೆ ಹವಾ. ಇದು ಈಗಷ್ಟೇ ಟೀಂ ಇಂಡಿಯಾಗೆ ಪ್ರವೇಶಿಸಿದ ಡೆಲ್ಲಿ ಬಾಯ್ ರಿಷಬ್ ಪಂತ್ ಪ್ರೊಫೈಲ್. ತನ್ನ ಸ್ಫೋಟಕ ಬ್ಯಾಟಿಂಗ್ ಹಾಗೂ ಅದ್ಭುತ ಕೀಪಿಂಗ್ ಕಂಡ ಕ್ರಿಕೆಟ್ ದಿಗ್ಗಜರೆಲ್ಲ ಈತ ಟೀಂ ಇಂಡಿಯಾ ಕಂಡ ಅದ್ಭುತ ವಿಕೆಟ್ ಕೀಪರ್ ಬ್ಯಾಟ್ಸ್ಮನ್. ಧೋನಿ ಉತ್ತರಾಧಿಕಾರಿ ಎಂದೇ ಹೇಳತೊಡಗಿದ್ದರು.
ಅಂಡರ್ 19 ಕ್ರಿಕೆಟ್'ನಲ್ಲಿ ಅಪ್ರತಿಮ ಸಾಧನೆ, 2016ರ ರಣಜಿ ಋತುವಿನಲ್ಲಿ ಈತನದ್ದೆ ಹವಾ. ಇದು ಈಗಷ್ಟೇ ಟೀಂ ಇಂಡಿಯಾಗೆ ಪ್ರವೇಶಿಸಿದ ಡೆಲ್ಲಿ ಬಾಯ್ ರಿಷಬ್ ಪಂತ್ ಪ್ರೊಫೈಲ್. ತನ್ನ ಸ್ಫೋಟಕ ಬ್ಯಾಟಿಂಗ್ ಹಾಗೂ ಅದ್ಭುತ ಕೀಪಿಂಗ್ ಕಂಡ ಕ್ರಿಕೆಟ್ ದಿಗ್ಗಜರೆಲ್ಲ ಈತ ಟೀಂ ಇಂಡಿಯಾ ಕಂಡ ಅದ್ಭುತ ವಿಕೆಟ್ ಕೀಪರ್ ಬ್ಯಾಟ್ಸ್ಮನ್. ಧೋನಿ ಉತ್ತರಾಧಿಕಾರಿ ಎಂದೇ ಹೇಳತೊಡಗಿದ್ದರು.
ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟು 3 ತಿಂಗಳು
ತನ್ನ ಪ್ರಥಮ ದರ್ಜೆಯ ಅದ್ವಿತೀಯ ಸಾಧನೆ ಕಂಡ ರಾಷ್ಟ್ರೀಯ ಆಯ್ಕೆ ಸಮಿತಿ ರಿಷಬ್ ಪಂತ್ರನ್ನ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಟೂರ್ನಿಗೆ ಆಯ್ಕೆ ಮಾಡಿತ್ತು. ಆಗ ರಿಷಬ್ ಪಂತ್ ಮತ್ತು ಆತನ ಕುಟುಂಬ ಖುಷಿಯ ಅಲೆಯಲ್ಲಿ ಕೊಚ್ಚಿ ಹೋಗಿತ್ತು. ಪಂತ್ ತಂದೆ ರಾಜೇಂದ್ರ ಪಂತ್ ಅಂತೂ ಮಗನ ಆಯ್ಕೆಗೆ ಕುಣಿದು ಕುಪ್ಪಳಿಸಿದ್ರು. ರಿಷಬ್ ಪಂತ್ರ ಕ್ರಿಕೆಟ್ನ ಗುರು ಕೂಡ ಆಗಿದ್ದ ರಾಜೇಂದ್ರ ಅಂದು ಸ್ವರ್ಗವೇ ಧರೆಗಿಳಿಯಿತೇನೋ ಎಂಬುವಂತೆ ಕುಣಿದು ಕುಪ್ಪಳಿಸಿದರು.
IPL ನಲ್ಲಿ ಮಿಂಚುವ ಮುನ್ನವೇ ಧೋನಿ ಉತ್ತರಾಧಿಕಾರಿಗೆ ಬಿಗ್ ಶಾಕ್
ಇಂಗ್ಲೆಂಡ್ ವಿರುದ್ಧದ ಟಿ20 ಟೂರ್ನಿಯಲ್ಲಿ ಕೇವಲ ಒಂದೇ ಒಂದು ಪಂದ್ಯವಾಡಿದ ಪಂತ್ IPL 10ನೇ ಸೀಸನ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಮತ್ತೆ ಟೀಂ ಇಂಡಿಯಾ ಸೆಲೆಕ್ಟರ್'ಗಳನ್ನ ತಮ್ಮ ಕಡೆಗೆ ಸೆಳೆಯಲು ರಿಷಬ್ ಇನ್ನಿಲ್ಲದ ಕಸರತ್ತು ನಡೆಸಿದ್ರು. ಡೆಲ್ಲಿ ಪರ ಆಡುವ ರಿಷಬ್ ಇಂದು RCB ವಿರುದ್ಧದ ಪಂದದಲ್ಲಿ ಅಬ್ಬರಿಸಲು ಫುಲ್ ಅಭ್ಯಾಸ ನಡೆಸಿದ್ರು. ಆದ್ರೆ ಮೊನ್ನೆ ಶುಕ್ರವಾರ ತಮ್ಮ ಮನೆಯಿಂದ ಬಂದ ಒಂದು ಫೋನ್ ಕಾಲ್ ಪಂತ್ರನ್ನ ಕುಸಿದು ಬೀಳುವಂತೆ ಮಾಡಿಬಿಡ್ತು. ತನ್ನ ಜೀವನದ ಗಾಡ್ ಫಾದರ್, ಗೈಡ್, ಫೀಲೋಸಫರ್ ಎಲ್ಲವೂ ಆಗಿದ್ದ ಆತನ ತಂದೆ ರಾಜೇಂದ್ರ ಪಂತ್ ಸ್ವರ್ಗವಾಸಿಯಾಗಿದ್ರು.
IPL ನಲ್ಲಿ ಮಿಂಚುವ ಮುನ್ನವೇ ಅಪ್ಪನ ಅಂತಿಮ ದರ್ಶನಕ್ಕೆ ದೌಡಾಯಿಸಿದ ಮಗ
ತನ್ನ ತಂದೆಯ ಸಾವಿನ ಸುದ್ದಿ ತಿಳಿಯುತಿದಂತೆ ಡೆಲ್ಲಿ ತಂಡವನ್ನ ಬಿಟ್ಟು ತಮ್ಮ ಮನೆಗೆ ತೆರಳಿದರು. ಕೊನೆಯ ಬಾರಿ ತಮ್ಮ ತಂದೆಯ ಮುಖವನ್ನ ನೋಡಿ ಅಂತಿಮ ವಿಧಿ ವಿಧಾನಗಳನ್ನು ಭಾರದ ಹೃದಯ ಹೊತ್ತು ಮುಗಿಸಿದ್ರು.
ಅಂತ್ಯೆಕ್ರಿಯೇ ಮುಗಿತ್ತಿದಂತೆ ಮತ್ತೆ ತಡ ಮಾಡದೆ ರಿಶಬ್ ಪಂತ್ ಇಂದಿನ ಪಂದ್ಯಕ್ಕಾಗಿ ನಿನ್ನಯೇ ಫ್ಲೈಟ್ ಹತ್ತಿಬಿಟ್ರು. ನೀನು ನಿನ್ನ ಗುರಿಯನ್ನ ಮುಟ್ಟಲು ಹಲವು ತ್ಯಾಗಗಳನ್ನ ಮಾಡಲೇ ಬೇಕೆನ್ನುವ ಆತನ ತಂದೆಯ ಮಾತುಗಳನ್ನ ನೆನಸಿಕೊಂಡು ನೋವನ್ನೂ ಮರೆತು ಮತ್ತೆ ತಮ್ಮ ತಂಡವನ್ನ ಸೇರಿಕೊಂಡಿದ್ದಾರೆ.
ಈ ಹಿಂದೆ ವಿಶ್ವ ಕ್ರಿಕೆಟ್ ಕಂಡ ಲೆಜೆಂಡರಿ ಕ್ರಿಕೆಟರ್ಗಳಾದ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿಯ ಜೀವನದಲ್ಲೂ ಕೂಡ ಇಂತಹುದ್ದೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ಸಂಧರ್ಭದಲ್ಲೀ ಇಬ್ಬರೂ ಲೆಜೆಂಡಗಳು ತಮ್ಮ ತಂದೆಯ ಸಾವಿನ ಬಳಿಕವೂ ಕ್ರೀಡಾಂಗಣಕ್ಕೆ ಬಂದು ಕ್ರಿಕೆಟ್ ಆಡಿದ್ರೂ ಇದು ಪಂತ್ ವಿಷಯದಲ್ಲೂ ರಿಪೀಟ್ ಆಗಿದೆ.
ಸದ್ಯ ಪಂತ್ ಪಿತೃ ವಿಯೋಗದ ನೋವಿನಲ್ಲೇ IPL ಸೀಸನ್ ಅನ್ನು ಆರಂಭಿಸಲಿದ್ದಾರೆ. ದೇವರು ಅವರಿಗಾದ ನೋವನ್ನು ತಡೆಯುವ ಶಕ್ತಿ ಕೊಡಲಿ ಎಂಬುದು ಎಲ್ಲರ ಆಶಯ.
