ಭಾರತ-ಆಫ್ಘಾನ್ ಟೆಸ್ಟ್'ಗೆ ಬೆಂಗಳೂರು ಆತಿಥ್ಯ..?

First Published 15, Jan 2018, 9:50 AM IST
Bengaluru might host Afghanistan inaugural Test
Highlights

ಕಳೆದ ಜೂನ್'ನಲ್ಲಿ ಆಫ್ಘಾನಿಸ್ತಾನ ಹಾಗೂ ಐರ್ಲೆಂಡ್ ತಂಡಗಳಿಗೆ ಐಸಿಸಿ ಟೆಸ್ಟ್ ತಂಡಗಳ ಮಾನ್ಯತೆ ನೀಡಿದೆ.

ನವದೆಹಲಿ(ಜ.15): ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ ಎನ್ನಲಾಗಿದೆ.

ಮುಂದಿನ ಜೂನ್ ವೇಳೆ ಪಂದ್ಯ ನಡೆಯುವ ಸಾಧ್ಯತೆಯಿದೆ. ಜುಲೈನಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮುನ್ನ 2 ಟಿ20 ಪಂದ್ಯವನ್ನಾಡಲು ಜೂನ್ ಅಂತ್ಯದ ವೇಳೆ ಭಾರತ, ಐರ್ಲೆಂಡ್‌'ಗೆ ಪ್ರಯಾಣ ಬೆಳಸಲಿದೆ.ಇದಕ್ಕೂ ಮುನ್ನಾ ಭಾರತ ಹಾಗೂ ಆಫ್ಘಾನಿಸ್ತಾನ ನಡುವೆ ಟೆಸ್ಟ್ ಪಂದ್ಯ ನಡೆಯಲಿದೆ.

ಈ ಮೊದಲು ಕೋಲ್ಕತಾದಲ್ಲಿ ಪಂದ್ಯ ಆಯೋಜಿಸಲು ಚಿಂತಿಸಲಾಗಿತ್ತಾದರೂ, ಬೆಂಗಳೂರಿಗೆ ವರ್ಗಾವಣೆ ಮಾಡಲು ಬಿಸಿಸಿಐ ಮುಂದಾಗಿದೆ ಎನ್ನಲಾಗಿದೆ. ಜ.16ರಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದು, ಸ್ಥಳ ಹಾಗೂ ದಿನಾಂಕದ ಕುರಿತು ಬಿಸಿಸಿಐ ಅಧಿಕೃತವಾಗಿ ಮಾಹಿತಿ ನೀಡಲಿದೆ ಎಂದು ತಿಳಿದು ಬಂದಿದೆ.

ಕಳೆದ ಜೂನ್'ನಲ್ಲಿ ಆಫ್ಘಾನಿಸ್ತಾನ ಹಾಗೂ ಐರ್ಲೆಂಡ್ ತಂಡಗಳಿಗೆ ಐಸಿಸಿ ಟೆಸ್ಟ್ ತಂಡಗಳ ಮಾನ್ಯತೆ ನೀಡಿದೆ.

loader