ರಾಜ್ಯ ಈಜು: ಬಸವನಗುಡಿ ಕೇಂದ್ರಕ್ಕೆ ಸಮಗ್ರ ಪ್ರಶಸ್ತಿ

ಕ್ರಿಕೆಟ್ ಮಾತ್ರವಲ್ಲ ಕರ್ನಾಟಕದಲ್ಲಿ ಇತರ ಕ್ರೀಡೆಗಳೂ ಅಷ್ಟೇ ಜನಪ್ರಿಯಾವಾಗಿದೆ. ಅದರಲ್ಲೂ ಕರ್ನಾಟಕದ ಈಜು ಪಟುಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇದೀಗ ರಾಜ್ಯದಲ್ಲಿನ  ಈಜು ಚಾಂಪಿಯನ್‌ಶಿಪ್‍‌ನಲ್ಲಿ ಬಸವನಗುಡಿ ಕೇಂದ್ರ ದಾಖಲೆ ಬರೆದಿದೆ. 
 

Basvanagudi center create new record in Senior swimming championship Bengaluru

ಬೆಂಗಳೂರು(ಆ.02): ರಾಜ್ಯದ ತಾರಾ ಈಜುಪಟುಗಳಾದ ಶ್ರೀಹರಿ ನಟರಾಜ್‌ ಹಾಗೂ ಸುವನಾ ಸಿ. ಭಾಸ್ಕರ್‌, ಇಲ್ಲಿನ ಬಸವನಗುಡಿ ಈಜು ಕೇಂದ್ರದಲ್ಲಿ ಗುರುವಾರ ಮುಕ್ತಾಯವಾದ ರಾಜ್ಯ ಹಿರಿಯರ ಈಜು ಚಾಂಪಿಯನ್‌ಶಿಪ್‌ನಲ್ಲಿ ದಾಖಲೆಯೊಂದಿಗೆ ಚಿನ್ನ ಗೆದ್ದರು. 3 ದಿನಗಳ ಕೂಟದಲ್ಲಿ 14 ಈಜು ಕೇಂದ್ರಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಇದರಲ್ಲಿ ಆತಿಥ್ಯ ವಹಿಸಿದ್ದ ಬಸವನಗುಡಿ ಈಜು ಕೇಂದ್ರ 374 ಅಂಕಗಳಿಸಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು.

ಇದನ್ನೂ ಓದಿ: ರಾಜ್ಯ ಹಿರಿಯರ ಈಜು ಕೂಟ: ಮೊದಲ ದಿನ 6 ದಾಖಲೆ

ಗುರುವಾರ ಪುರುಷರ 50 ಮೀ. ಬ್ಯಾಕ್‌ಸ್ಟೊ್ರೕಕ್‌ನಲ್ಲಿ ಶ್ರೀಹರಿ ನಟರಾಜ್‌ 25.63 ಸೆ.ಗಳಲ್ಲಿ ಗುರಿ ಮುಟ್ಟಿದರು. ಮಹಿಳೆಯರ 50 ಮೀ. ಬ್ಯಾಕ್‌ಸ್ಟೊ್ರೕಕ್‌ನಲ್ಲಿ ಸುವನಾ ಸಿ. ಭಾಸ್ಕರ್‌ 30.89 ಸೆ.ಗಳಲ್ಲಿ ಗುರಿ ತಲುಪಿದರು. ಪುರುಷರ 4/100 ಮೀ. ಮೆಡ್ಲೆಯಲ್ಲಿ ರಕ್ಷಿತ್‌, ಮಾನವ್‌, ಶ್ರೀಹರಿ ಹಾಗೂ ತನೀಶ್‌ ಅವರಿದ್ದ ತಂಡ 4 ನಿಮಿಷ 00.50 ಸೆ.ಗಳಲ್ಲಿ ಗುರಿ ತಲುಪಿತು. 

ಇದನ್ನೂ ಓದಿ: ಇಂಡೋ-ಪಾಕ್ ಅಬ್ಬರದಲ್ಲಿ ಮರೆಯಾಯ್ತು ಬೆಂಗಳೂರು ಪ್ಯಾರಾ ಈಜುಪಟು ಸಾಧನೆ !

ಮಹಿಳೆಯರ 4/100 ಮೀ. ಮೆಡ್ಲೆಯಲ್ಲಿ ರಿದಿಮಾ, ಸಲೋನಿ, ಮಾಳವಿಕ ಹಾಗೂ ಖುಷಿ ದಿನೇಶ್‌ ಅವರನ್ನೊಳಗೊಂಡ ತಂಡ 4 ನಿಮಿಷ 36.78 ಸೆ.ಗಳಲ್ಲಿ ಗುರಿ ಮುಟ್ಟಿದಾಖಲೆಯೊಂದಿಗೆ ಚಿನ್ನ ಗೆದ್ದಿತು. ವಾಟರ್‌ಪೋಲೋ ಸ್ಪರ್ಧೆಯಲ್ಲಿ ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ ಬಸವನಸಗುಡಿ ಈಜು ಕೇಂದ್ರ ಮೊದಲ ಪ್ರಶಸ್ತಿ ಗೆದ್ದರೆ, ನೆಟ್ಟಕಲ್ಲಪ್ಪ ಈಜು ಕೇಂದ್ರ ರನ್ನರ್‌ ಅಪ್‌ ಪ್ರಶಸ್ತಿ ಪಡೆಯಿತು.

Latest Videos
Follow Us:
Download App:
  • android
  • ios