ಪುರುಷರ ಡಬಲ್ಸ್‌'ನ ಟ್ರಂಪ್ ಪಂದ್ಯದಲ್ಲಿ ಬೆಂಗಳೂರು ತಂಡ ಕೆ.ಎಸ್. ರಾಂಗ್ ಮತ್ತು ಎಂ. ಬೋಯಿ ಜೋಡಿ 15-13, 15-12 ಗೇಮ್‌'ಗಳಿಂದ ಅಹಮದಾಬಾದ್‌'ನ ರೇಜಿನಾಲ್ಡ್ ಮತ್ತು ಕೆ. ನಂದಗೋಪಾಲ್ ಜೋಡಿ ಎದುರು ಗೆಲುವು ಸಾಧಿಸಿತು.

ಹೈದರಾಬಾದ್(ಜ.14): ಪುರುಷರ ಸಿಂಗಲ್ಸ್ ಮತ್ತು ಮಿಶ್ರ ಡಬಲ್ಸ್ ವಿಭಾಗದಲ್ಲಿ ಜಯ ಸಾಧಿಸಿದ ಬೆಂಗಳೂರು ಬ್ಲಾಸ್ಟರ್ಸ್‌, 3ನೇ ಆವೃತ್ತಿಯ ಪ್ರಿಮೀಯರ್ ಬ್ಯಾಡ್ಮಿಂಟನ್ ಲೀಗ್‌'ನ ಸೆಮೀಸ್‌'ನಲ್ಲಿ 4-3 ಅಂಕಗಳಿಂದ ಅಹಮದಾಬಾದ್ ಸ್ಮ್ಯಾಶ್ ಮಾಸ್ಟರ್ಸ್‌ ಎದುರು ಗೆಲುವು ಪಡೆದಿದೆ. ಈ ಮೂಲಕ ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಬೆಂಗಳೂರು ತಂಡ, ಹೈದರಾಬಾದ್ ಎದುರು ಸೆಣಸಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರ ನಡೆದ 2ನೇ ಸೆಮಿಫೈನಲ್‌'ನ ಪುರುಷರ ಸಿಂಗಲ್ಸ್‌'ನ ಮೊದಲ ಪಂದ್ಯದಲ್ಲಿ ಬೆಂಗಳೂರು ತಂಡದ ಸಿ.ಡಬ್ಲ್ಯೂ. ಫೆಂಗ್ 2-15, 15-14, 10-15 ಗೇಮ್‌'ಗಳಿಂದ ಅಹಮದಾಬಾದ್‌'ನ ಸೌರಭ್ ವರ್ಮಾ ಎದುರು ಪರಾಭವ ಹೊಂದಿದರು. ಪುರುಷರ ಡಬಲ್ಸ್‌'ನ ಟ್ರಂಪ್ ಪಂದ್ಯದಲ್ಲಿ ಬೆಂಗಳೂರು ತಂಡ ಕೆ.ಎಸ್. ರಾಂಗ್ ಮತ್ತು ಎಂ. ಬೋಯಿ ಜೋಡಿ 15-13, 15-12 ಗೇಮ್‌'ಗಳಿಂದ ಅಹಮದಾಬಾದ್‌'ನ ರೇಜಿನಾಲ್ಡ್ ಮತ್ತು ಕೆ. ನಂದಗೋಪಾಲ್ ಜೋಡಿ ಎದುರು ಗೆಲುವು ಸಾಧಿಸಿತು. ಮಹಿಳಾ ಸಿಂಗಲ್ಸ್‌'ನಲ್ಲಿ ಬೆಂಗಳೂರಿನ ಗಿಲ್ಮೋರ್ 15-8, 13-15, 8-15 ಗೇಮ್‌'ಗಳಿಂದ ಅಹಮದಾಬಾದ್‌'ನ ಟಿ.ಟಿ. ಯಿಂಗ್ ಎದುರು ಸೋಲು ಕಂಡರು.

ಪುರುಷರ ಸಿಂಗಲ್ಸ್‌'ನ ಮತ್ತೊಂದು ಪಂದ್ಯದಲ್ಲಿ ಬೆಂಗಳೂರಿನ ವಿಕ್ಟರ್ ಅಕ್ಸೆಲ್ಸನ್ ಪ್ರಣಯ್ ಎದುರು, ಮಿಶ್ರ ಡಬಲ್ಸ್‌'ನಲ್ಲಿ ಬೆಂಗಳೂರಿನ ರಾಂಗ್ ಮತ್ತು ಎನ್.ಎಸ್. ರೆಡ್ಡಿ ಜೋಡಿ ಗೆಲುವು ಪಡೆಯಿತು.