ಸಚಿನ್ ಪುತ್ರಿಗೆ ಕಾಟ ಕೊಡುತ್ತಿದ್ದವ ಆರೆಸ್ಟ್

sports | 1/8/2018 | 4:14:00 AM
naveena
Suvarna Web Desk
Highlights

‘ತಮ್ಮ ಸಂಬಂಧಿಯೊಬ್ಬರಿಂದ ದೂರವಾಣಿ ಸಂಖ್ಯೆ ಪಡೆದಿದ್ದ ದೇಬ್‌ ಕುಮಾರ್, ಸಾರಾರನ್ನು ಮದುವೆಯಾಗಲು ಇಚ್ಛಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ವಾದಿಸುತ್ತಾನೆ, ಜತೆಗೆ ಸಚಿನ್ ಯಾರೆಂದು ಗೊತ್ತಾ ಎಂದು ಕೇಳಿದರೆ ಅವರು ನನ್ನ ಮಾವ ಎಂದು ನಗುತ್ತಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈ(ಜ.08): ಮದುವೆಯಾಗುವಂತೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಪುತ್ರಿ ಸಾರಾಗೆ ಪದೇ ಪದೇ ದೂರವಾಣಿ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಹಾಗೂ ಅಪಹರಣದ ಬೆದರಿಕೆ ಹಾಕಿದ್ದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ದೇಬ್‌ ಕುಮಾರ್ ಮೈಟಿ (32) ಬಂಧಿತ ಆರೋಪಿ. ಕೆಲ ದಿನಗಳಿಂದ ತೆಂಡುಲ್ಕರ್ ಮನೆಗೆ ಆರೋಪಿ ಕರೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಯ ಪತ್ತೆಗಾಗಿ ಮುಂಬೈ ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿತ್ತು.

‘ತಮ್ಮ ಸಂಬಂಧಿಯೊಬ್ಬರಿಂದ ದೂರವಾಣಿ ಸಂಖ್ಯೆ ಪಡೆದಿದ್ದ ದೇಬ್‌ ಕುಮಾರ್, ಸಾರಾರನ್ನು ಮದುವೆಯಾಗಲು ಇಚ್ಛಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ವಾದಿಸುತ್ತಾನೆ, ಜತೆಗೆ ಸಚಿನ್ ಯಾರೆಂದು ಗೊತ್ತಾ ಎಂದು ಕೇಳಿದರೆ ಅವರು ನನ್ನ ಮಾವ ಎಂದು ನಗುತ್ತಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಪೇಂಟಿಂಗ್(ಬಣ್ಣ ಬಳಿಯುವ) ಕೆಲಸ ಕೆಲಸ ಮಾಡುತ್ತಿದ್ದು, ಕೆಲ ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗುತ್ತಿದೆ.

Comments 0
Add Comment

    Government honour sought for demised ex solder

    video | 4/9/2018 | 10:11:50 AM
    nirupama s
    Associate Editor