ಭಾರತ ವಿರುದ್ಧದ ಏಕದಿನ ಸರಣಿಗೆ ಇಂಗ್ಲೆಂಡ್ ಆಯ್ಕೆ ಸಮಿತಿ ತಂಡ ಪ್ರಕಟಿಸಿದೆ. ಗಾಯಗೊಂಡಿದ್ದ ಬೆನ್ ಸ್ಟೋಕ್ಸ್‌ ಮತ್ತೆ ತಂಡ ಸೇರಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಟೋಕ್ಸ್ ವಾಪಾಸ್ಸಾತಿಯಿಂದ ಇಂಗ್ಲೆಂಡ್ ತಂಡ ಮತ್ತಷ್ಟು ಬಲಿಷ್ಠಗೊಂಡಿದೆ.ಇಂಗ್ಲೆಂಡ್ ತಂಡ ಹೇಗಿದೆ? ಇಲ್ಲಿದೆ ವಿವರ. 

ಇಂಗ್ಲೆಂಡ್(ಜೂ.29): ಇಂಜುರಿಯಿಂದ ಚೇತರಿಸಿಕೊಂಡಿರುವ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ತಂಡಕ್ಕೆ ವಾಪಾಸ್ಸಾಗಿದ್ದಾರೆ. ಭಾರತ ವಿರುದ್ಧದ 3 ಏಕದಿನ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಂಡ ಪ್ರಕಟಿಸಿದೆ. ಬೆನ್ ಸ್ಟೋಕ್ಸ್‌ಗೆ ಸ್ಥಾನ ಕಲ್ಪಿಸಿರುವ ಆಯ್ಕೆ ಸಮಿತಿ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿದೆ.

ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡ ಸ್ಟೋಕ್ಸ್, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ಟಿ-ಟ್ವೆಂಟಿ ಸರಣಿಯಿಂದ ಹೊರಗುಳಿದಿದ್ದರು. ಇದೀಗ ಗಾಯದಿಂದ ಚೇತರಿಸಿಕೊಂಡಿರುವ ಸ್ಟೋಕ್ಸ್ ತಂಡಕ್ಕೆ ಮರಳಿದ್ದಾರೆ.

ಜುಲೈ 3 ರಿಂದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿ ಆರಂಭಗೊಳ್ಳಲಿದೆ. 3 ಟಿ20, 3 ಏಕದಿನ ಹಾಗೂ 5 ಟೆಸ್ಟ್ ಪಂದ್ಯಗಳ ಸರಣಿ ಭಾರತದ ಪಾಲಿಗೆ ಮಹತ್ವದ್ದಾಗಿದೆ. ಇದೀಗ ಇಂಗ್ಲೆಂಡ್ ತಂಡ ಪ್ರಕಟಿಸೋ ಮೂಲಕ ಭರ್ಜರಿ ತಯಾರಿಗೆ ಮುಂದಾಗಿದೆ.

ಇಂಗ್ಲೆಂಡ್ ತಂಡ: ಇಯಾನ್ ಮಾರ್ಗನ್(ನಾಯಕ), ಮೊಯಿನ್ ಆಲಿ ಜಾನಿ ಬೈರಿಸ್ಟೋ, ಜೇಕ್ ಬಾಲ್, ಜೋಸ್ ಬಟ್ಲರ್, ಟಾಮ್ ಕುರ್ರನ್, ಅಲೆಕ್ಸ್ ಹೇಲ್ಸ್, ಲಿಯಾಮ್ ಪ್ಲೆಂಕೆಟ್, ಆದಿಲ್ ರಶಿದ್, ಜೋ ರೂಟ್ ಜೇಸನ್ ರಾಯ್, ಬೆನ್ ಸ್ಟೋಕ್ಸ್, ಡೇವಿಡ್ ವಿಲೆ ಹಾಗೂ ಮಾರ್ಕ್ ವುಡ್