ಭಾನುವಾರ ವೆಸ್ಟ್ಇಂಡೀಸ್ ನಡೆದ 3ನೇ ಏಕದಿನ ಬಳಿಕ ಸ್ಟೋಕ್ಸ್ ನೈಟ್‌ಕ್ಲಬ್‌ಗೆ ತೆರಳಿದ್ದರು. ಈ ವೇಳೆ ವ್ಯಕ್ತಿಯೊಬ್ಬರ ಮೇಲೆ ಸ್ಟೋಕ್ಸ್ ಗಂಭೀರವಾಗಿ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದ್ದು, ಸ್ಟೋಕ್ಸ್ರನ್ನು ಬಂಧಿಸಿದ ಪೊಲೀಸರು ವಿಚಾರಣೆ ಬಳಿಕ ಬಿಡುಗಡೆ ಮಾಡಿದ್ದರು.
ಲಂಡನ್(ಸೆ.27): ಆಲ್ರೌಂಡರ್ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡದ ಉಪನಾಯಕರಾಗಿ ಮುಂದುವರಿದಿದ್ದು, ಮುಂಬರುವ ಆ್ಯಷಸ್ ಸರಣಿಗೂ ಅವರನ್ನು ಆಯ್ಕೆ ಮಾಡಲಾಗಿದೆ.
ಇನ್ನು ಬ್ರಿಸ್ಟೊಲ್ನಲ್ಲಿ ಭಾನುವಾರ ತಡರಾತ್ರಿ ನೈಟ್ಕ್ಲಬ್ನಲ್ಲಿ ನಡೆದ ಗಲಾಟೆ ವೇಳೆ ಸ್ಟೋಕ್ಸ್ರ ಕೈ ಮೂಳೆಗೆ ಪೆಟ್ಟುಬಿದ್ದಿದೆ ಎಂದು ತಿಳಿದು ಬಂದಿದೆ. ಪ್ರಕರಣದ ವಿಚಾರಣೆ ಮುಂದುವರಿದಿದ್ದು, ಇನ್ನು ಪೂರ್ಣಗೊಂಡಿಲ್ಲ. ಆದಾಗ್ಯೂ ಸ್ಟೋಕ್ಸ್ರನ್ನು ಆ್ಯಷಸ್ ಸರಣಿಗೆ ಆಯ್ಕೆ ಮಾಡಲಾಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ನ ನಿರ್ದೇಶಕ ಆ್ಯಂಡ್ರೂ ಸ್ಟ್ರಾಸ್ ತಿಳಿಸಿದ್ದಾರೆ.
ಭಾನುವಾರ ವೆಸ್ಟ್ಇಂಡೀಸ್ ನಡೆದ 3ನೇ ಏಕದಿನ ಬಳಿಕ ಸ್ಟೋಕ್ಸ್ ನೈಟ್ಕ್ಲಬ್ಗೆ ತೆರಳಿದ್ದರು. ಈ ವೇಳೆ ವ್ಯಕ್ತಿಯೊಬ್ಬರ ಮೇಲೆ ಸ್ಟೋಕ್ಸ್ ಗಂಭೀರವಾಗಿ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದ್ದು, ಸ್ಟೋಕ್ಸ್ರನ್ನು ಬಂಧಿಸಿದ ಪೊಲೀಸರು ವಿಚಾರಣೆ ಬಳಿಕ ಬಿಡುಗಡೆ ಮಾಡಿದ್ದರು.
