ಆಸ್ಟ್ರೇಲಿಯನ್ ಓಪನ್: ನಡಾಲ್ ಶುಭಾರಂಭ; ವೀನಸ್'ಗೆ ಆಘಾತ

Belinda Bencic shocks Venus Williams at Australian Open
Highlights

17ನೇ ಗ್ರ್ಯಾಂಡ್ ಸ್ಲಾಮ್ ಮೇಲೆ ಕಣ್ಣಿಟ್ಟಿರುವ ವಿಶ್ವದ ನಂ.1 ಶ್ರೇಯಾಂಕಿತ ಆಟಗಾರ ಸ್ಪೇನ್‌'ನ ರಾಫೆಲ್ ನಡಾಲ್, ಮೊದಲ ಸುತ್ತಿನಲ್ಲಿ ಸುಲಭ ಗೆಲುವು ಪಡೆದಿದ್ದು, 2ನೇ ಸುತ್ತಿಗೆ ಮುನ್ನಡೆದಿದ್ದಾರೆ. ನಡಾಲ್ 6-1, 6-1, 6-1 ಸೆಟ್‌'ಗಳಿಂದ ಡೊಮಿನಿಕನ್‌'ನ ವಿಕ್ಟರ್ ಎಸ್ಟ್ರೆಲ್ಲಾ ಬರ್ಗಸ್ ಎದುರು ಜಯ ಪಡೆದರು.

ಮೆಲ್ಬರ್ನ್(ಜ.15): ಆಸ್ಟ್ರೇಲಿಯನ್ ಓಪನ್ ಮೊದಲ ದಿನವೇ ಅಚ್ಚರಿಯ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ಹಾಲಿ ರನ್ನರ್ ಅಪ್ ವೀನಸ್ ವಿಲಿಯಮ್ಸ್ ಮೊದಲ ಸುತ್ತಿನಲ್ಲೇ ಹೊರಬಿದ್ದು ಆಘಾತ ಅನುಭವಿಸಿದ್ದಾರೆ. ಜತೆಗೆ ಭಾರತದ ಯೂಕಿ ಭಾಂಬ್ರಿ ಮೊದಲ ಸುತ್ತಿನಲ್ಲಿ ಸೋಲುಂಡು ನಿರ್ಗಮಿಸಿದ್ದಾರೆ.

ಅಮೆರಿಕದ ವೀನಸ್ ವಿಲಿಯಮ್ಸ್, ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಸಿಂಗಲ್ಸ್‌'ನಲ್ಲಿ 3-6,5-7 ನೇರ ಸೆಟ್'ಗಳಲ್ಲಿ ಸ್ವಿಟ್ಜರ್'ಲೆಂಡ್'ನ ಬೆಲಿಂದಾ ಬೆನ್ಸಿಕ್ ವಿರುದ್ಧ ಅನಿರೀಕ್ಷಿತ ಸೋಲು ಕಂಡಿದ್ದಾರೆ.

ಮೊದಲ ಸುತ್ತಿನಲ್ಲೇ ಭಾಂಬ್ರಿ ಔಟ್:

ಭಾರತದ ಸ್ಟಾರ್ ಸಿಂಗಲ್ಸ್ ಆಟಗಾರ ಯೂಕಿ ಭಾಂಬ್ರಿ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಸೋಲು ಕಂಡು ಹೊರಬಿದ್ದಿದ್ದಾರೆ. ಭಾಂಬ್ರಿ 6-7(4-7), 4-6, 3-6 ಸೆಟ್‌'ಗಳಿಂದ ಸೈಪ್ರಸ್‌'ನ ಮಾರ್ಕಸ್ ಬಾಗ್ದಾಟಿಸ್ ಎದುರು ಪರಾಭವ ಹೊಂದಿದರು.

ನಡಾಲ್ ಶುಭಾರಂಭ:

loader