Asianet Suvarna News Asianet Suvarna News

ವಿಂಡೀಸ್ ಪ್ರವಾಸಕ್ಕೂ ಮುನ್ನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ

ಟೀಂ ಇಂಡಿಯಾ ವಿಂಡೀಸ್ ಪ್ರವಾಸ ಕೈಗೊಳ್ಳುವ ಮುನ್ನ ಐಸಿಸಿ ಟೆಸ್ಟ್ ಶ್ರೇಯಾಂಕ ಪ್ರಕಟಗೊಂಡಿದ್ದು, ಭಾರತ ತಂಡದ ನಾಯಕ ಬ್ಯಾಟಿಂಗ್ ವಿಭಾಗದಲ್ಲಿ ನಂ.1 ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Before Windies Tour Virat Kohli maintains number one spot in ICC Test Rankings
Author
Dubai - United Arab Emirates, First Published Jul 24, 2019, 12:23 PM IST

ದುಬೈ[ಜು.24]: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ನೂತನವಾಗಿ ಬಿಡುಗಡೆಯಾದ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ICC ಏಕದಿನ ರ‍್ಯಾಂಕಿಂಗ್ ಪ್ರಕಟ

ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಆಸ್ಪ್ರೇಲಿಯಾ ವಿರುದ್ದದ ಟೆಸ್ಟ್‌ ಸರಣಿಯನ್ನು 2-1 ರಿಂದ ಜಯಿಸಿತ್ತು. ಸದ್ಯ ಕೊಹ್ಲಿ (922) ರೇಟಿಂಗ್‌ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಟೆಸ್ಟ್‌ ಸ್ಪೆಷಲಿಸ್ಟ್‌ ಚೇತೇಶ್ವರ್‌ ಪೂಜಾರ (881) ರೇಟಿಂಗ್‌ ಅಂಕಗಳಿಂದ 3ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ (913) ರೇಟಿಂಗ್‌ ಅಂಕಗಳಿಂದ 2ನೇ ಸ್ಥಾನದಲ್ಲಿದ್ದಾರೆ. ಯುವ ವಿಕೆಟ್‌ ಕೀಪರ್‌ ಮತ್ತು ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ 15ನೇ ಸ್ಥಾನ ಪಡೆದಿದ್ದಾರೆ.

ತಂಡಗಳ ರ‍್ಯಾಂಕಿಂಗ್ನಲ್ಲೂ ಭಾರತ ತಂಡ ಮೊದಲ ಸ್ಥಾನದಲ್ಲಿದೆ. ಉಳಿದಂತೆ ನ್ಯೂಜಿಲೆಂಡ್‌ (2), ದಕ್ಷಿಣ ಆಫ್ರಿಕಾ (3), ವಿಶ್ವಕಪ್‌ ವಿಜೇತ ತಂಡ ಇಂಗ್ಲೆಂಡ್‌ (4) ಹಾಗೂ ಆಸ್ಪ್ರೇಲಿಯಾ (5) ನೇ ಸ್ಥಾನ ಪಡೆದಿವೆ.

ಬೌಲರ್‌ಗಳ ಪಟ್ಟಿಯ ಅಗ್ರ 10ರಲ್ಲಿ ಭಾರತದ ಇಬ್ಬರೂ ಸ್ಪಿನ್ನರ್‌ಗಳು ಸ್ಥಾನ ಉಳಿಸಿಕೊಂಡಿದ್ದಾರೆ. ರವೀಂದ್ರ ಜಡೇಜಾ (6), ರವಿಚಂದ್ರನ್‌ ಅಶ್ವಿನ್‌ (10)ನೇ ಸ್ಥಾನ ಪಡೆದಿದ್ದಾರೆ. ಭಾರತದ ತಾರಾ ವೇಗದ ಬೌಲರ್‌ ಜಸ್ಪ್ರೀತ್‌ ಬುಮ್ರಾ (16)ನೇ ಸ್ಥಾನದಲ್ಲಿದ್ದಾರೆ. ಟೆಸ್ಟ್‌ ಆಲ್ರೌಂಡರ್‌ ಪಟ್ಟಿಯಲ್ಲಿ ಜಡೇಜಾ (3) ಅಶ್ವಿನ್‌ (6) ನೇ ಸ್ಥಾನ ಹೊಂದಿದ್ದಾರೆ.
 

Follow Us:
Download App:
  • android
  • ios