ನವದೆಹಲಿ(ಅ.03): ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಆಡಳಿತದ ಸುಧಾರಣೆಗಾಗಿ ಮಾಡಿರುವ ಶಿಫಾ​ರ​ಸು​ಗ​ಳನ್ನು ಅಳ​ವ​ಡಿ​ಸಿ​ಕೊ​ಳ್ಳದೆ ಮೊಂಡು ನೀತಿ ಅನು​ಸ​ರಿ​ಸು​ತ್ತಿ​ರುವ ಬಿಸಿಸಿಐನ ಯಾವುದೇ ಬ್ಯಾಂಕ್‌ ವಹಿವಾಟಿಗೆ ಅವಕಾಶ ಕಲ್ಪಿಸದಂತೆ ಬ್ಯಾಂಕ್‌ಗಳಿಗೆ ಲೋಧಾ ಸಮಿ​ತಿ​ ಸ್ಪಷ್ಟಸೂಚನೆ ನೀಡಿದೆ.

‘‘ಸೆ. 30ರಂದು ನಡೆದ ವಿಶೇಷ ತುರ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಂಡ​ಳಿಯು ತನ್ನ ಅಧೀನ ಸಂಸ್ಥೆ​ಗ​ಳಿಗೆ ಭಾರೀ ಮೊತ್ತದ ಹಣ​ವನ್ನು ನೀಡುವ ಕುರಿ​ತಂತೆ ನಿರ್ಣಯ ಕೈಗೊಂಡಿದ್ದು, ಮಂಡ​ಳಿಯ ಬ್ಯಾಂಕ್‌ ವ್ಯವ​ಹಾ​ರ​ಗ​ಳಿಗೆ ತಡೆ ಹಾಕ​ಲಾ​ಗಿದೆ’ ಎಂದು ನ್ಯಾ. ಲೋಧಾ ಸಮಿತಿ ಹೇಳಿ​ದೆ.

ಇದೇ ವೇಳೆ ಬಿಸಿ​ಸಿಐ ಕಾರ್ಯ​ದರ್ಶಿ ಅಜಯ್‌ ಶಿರ್ಕೆ, ಸಿಇಒ ರಾಹುಲ್‌ ಜೊಹ್ರಿ ಹಾಗೂ ಖಜಾಂಚಿ ಅನಿ​ರುದ್‌್ಧ ಚೌಧ​ರಿಗೂ ಪತ್ರ ಬರೆ​ದಿ​ರುವ ಸಮಿ​ತಿ, ತಾನು ಕೈಗೊಂಡಿ​ರುವ ಕ್ರಮದ ಬಗ್ಗೆ ಮಾಹಿತಿ ನೀಡಿ​ದೆ​ಯ​ಲ್ಲದೆ, ಸೆ. 31ರ ನಂತರ ಜಾರಿಗೆ ಬರು​ವಂತೆ ಯಾವುದೇ ಆರ್ಥಿಕ ನಿರ್ಧಾ​ರ​ಗ​ಳನ್ನು ಕೈಗೊ​ಳ್ಳ​ದಂತೆ ಕಟ್ಟು​ನಿ​ಟ್ಟಿನ ಸೂಚನೆ ನೀಡಿದೆ.