ಆಫ್ಘಾನಿಸ್ತಾನ ಟೆಸ್ಟ್: ಕೊಹ್ಲಿ ಬೆನ್ನಿಗೆ ನಿಂತ ಬಿಸಿಸಿಐ

BCCI Urges Critics to Understand Virat Kohli County Decision
Highlights

ಬೆಂಗಳೂರಿನಲ್ಲಿ ಜೂನ್ 14-18ರವರೆಗೆ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ವಿರುದ್ಧ ಆಫ್ಘಾನಿಸ್ತಾನ ತಂಡವು ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಲಿದೆ.

ಬೆಂಗಳೂರು[ಮೇ.09]: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವುದಕ್ಕಾಗಿ ವಿರಾಟ್ ಕೊಹ್ಲಿ ಕೌಂಟಿ ಆಡಲಿದ್ದಾರೆ. ಹಾಗಾಗಿ ಆಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್’ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

‘ಕೊಹ್ಲಿಗೆ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಲ್ಗೊಳ್ಳಬಾರದು ಎಂಬ ಉದ್ದೇಶವಿಲ್ಲ. ಆದರೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಾದ ಅಗತ್ಯತೆ ಇದೆ. ತಂಡದ ಹಿತದೃಷ್ಟಿಯಿಂದ ಕೊಹ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ’ ಎಂದು ಅಮಿತಾಭ್ ಹೇಳಿದರು. 

ಜೂನ್’ನಲ್ಲಿ ವಿರಾಟ್ ಕೊಹ್ಲಿಯು ಇಂಗ್ಲೆಂಡ್’ನ ಕೌಂಟಿ ಕ್ರಿಕೆಟ್’ನಲ್ಲಿ ಸರ್ರೆ ತಂಡದ ಪರ ಕಣಕ್ಕಿಳಿಯಲಿದ್ದಾರೆ. ವಿರಾಟ್ ಕೊಹ್ಲಿ ಬದಲಿಗೆ ಕನ್ನಡಿಗ ಕರುಣ್ ನಾಯರ್’ಗೆ ಟೀಂ ಇಂಡಿಯಾದಲ್ಲಿ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನಲ್ಲಿ ಜೂನ್ 14-18ರವರೆಗೆ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ವಿರುದ್ಧ ಆಫ್ಘಾನಿಸ್ತಾನ ತಂಡವು ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಲಿದೆ.

loader