Asianet Suvarna News Asianet Suvarna News

ಐಪಿಎಲ್ ಸ್ಫಾಟ್ ಫಿಕ್ಸಿಂಗ್‌ಗೆ ತಿರುವು-ಹೊಸ ತನಿಖೆಗೆ ಆದೇಶಿಸಿದ ಬಿಸಿಸಿಐ

2013ರ ಐಪಿಎಲ್ ಸ್ಫಾಟ್ ಫಿಕ್ಸಿಂಗ್ ಪ್ರಕರಣ ಯಾವ ಮಟ್ಟಕ್ಕೆ ಭಾರತೀಯ ಕ್ರಿಕೆಟ್ ರಂಗಕ್ಕೆ ಮಸಿ ಬಳಿಯಿತು ಅನ್ನೋದು ಯಾರು ಮರೆತಿಲ್ಲ. ಇದೀಗ ಇದೇ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಫಿಕ್ಸಿಂಗ್ ಆರೋಪ ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಮೇಲೆರಗಿದೆ.
 

BCCI to conduct a fresh probe in the allegations of IPL spot fixing
Author
Bengaluru, First Published Aug 28, 2018, 6:10 PM IST

ಮುಂಬೈ(ಆ.28): ಐಪಿಎಲ್ ಸ್ಫಾಟ್ ಫಿಕ್ಸಿಂಗ್ ಪ್ರಕರಣ ಅಗೆದಷ್ಟು ಹೊಸ ಹೊಸ ಮಾಹಿತಿಗಳು ಹೊರಬರುುತ್ತಲೇ ಇದೆ.  2013ರ ಐಪಿಎಲ್ ಸ್ಫಾಟ್ ಫಿಕ್ಸಿಂಗ್ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಳ್ಳೋ ಸೂಚನೆ ಸಿಕ್ಕಿದೆ.

ಹಿರಿಯ ತನಿಖಾಧಿಕಾರಿ ಬಿಬಿ ಮಿಶ್ರಾ ಇತ್ತೀಚೆಗಷ್ಟೇ ಫಿಕ್ಸಿಂಗ್ ಕುರಿತು ಹೊಸ ಮಾಹಿತಿ ಬಹಿರಂಗ ಪಡಿಸಿದ್ದರು. 2013ರ ಐಪಿಎಲ್ ಸ್ಫಾಟ್ ಫಿಕ್ಸಿಂಗ್ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿತ್ತು. 2011ರ ವಿಶ್ವಕಪ್ ಗೆಲುವಿನ ತಂಡದ ಸದಸ್ಯ, 2008-09ರ ಸಾಲಿನಲ್ಲಿ ಬುಕ್ಕಿಯೊಂದಿಗೆ ನಿಕಟ ಸಂಪಕರ್ವಿದ್ದರು ಎಂದಿದ್ದರು.

2013ರ ಐಪಿಎಲ್ ಸ್ಫಾಟ್ ಫಿಕ್ಸಿಂಗ್ ತನಿಖೆ ವ್ಯಾಪ್ತಿ ಮೀರಿ ಮಾಹಿತಿ ದೊರಕಿತ್ತು. ಬೆಟ್ಟಿಂಗ್ ಹಾಗೂ ಸ್ಫಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್, ಅಳಿಯ ಗುರುನಾಥ್ ಮೇಯಪ್ಪನ್, ರಾಜ್ ಕುಂದ್ರಾ ಸೇರಿದಂತೆ ಹಲವರ ವಿರುದ್ಧ ತನಿಖೆ ಕೈಗೊಳ್ಳಲಾಗಿತ್ತು. ಹೀಗಾಗಿ ಟೀಂ ಇಂಡಿಯಾ ಕ್ರಿಕೆಟಿಗನ ಮೇಲೆ ತನಿಖೆ ನಡೆಸಲು ಸಾಧ್ಯವಾಗಿಲ್ಲ ಎಂದು ಬಿಬಿ ಮಿಶ್ರಾ ಹೇಳಿದ್ದರು.

ಬಿಬಿ ಮಿಶ್ರಾ ಹೇಳಿಕೆಯನ್ನ ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಸಿಒಎ ವಿನೋದ್ ರೈ ಇದೀಗ ಹೊಸ ತನಿಖೆಗೆ ಆದೇಶಿಸಿದ್ದಾರೆ. ಹೀಗಾಗಿ ಐಪಿಎಲ್ ಸ್ಫಾಟ್ ಫಿಕ್ಸಿಂಗ್ ಪ್ರಕರಣ ಹೊಸ ತಿರುವು ಪಡೆದುಕೊಳ್ಳಿಲಿದೆ. ಇಷ್ಟೇ ಅಲ್ಲ ಟೀಂ ಇಂಡಿಯಾ ಪ್ರಮುಖ ಆಟಗಾರನ ಹೆಸರು ಫಿಕ್ಸಿಂಗ್ ಜೊತೆ ಥಳುಕು ಹಾಕಿಕೊಂಡಿರುವುದು ಮತ್ತೆ ಕ್ರಿಕೆಟ್ ಮಾನ ಬೀದಿ ಪಾಲಾಗೋ ಸಾಧ್ಯತೆ ಇದೆ.

Follow Us:
Download App:
  • android
  • ios