ನವದೆಹಲಿ[ಆ.28]: ‘ಬಿಸಿಸಿಐಗೆ ನೂತನ ಸಂವಿಧಾನವನ್ನು ಅಳವಡಿಸಿಕೊಳ್ಳಲಾಗಿದ್ದು, 90 ದಿನಗಳೊಳಗಾಗಿ ಚುನಾವಣೆ ನಡೆಸಲಾಗುವುದು’ ಎಂದು ಸುಪ್ರೀಂಕೋರ್ಟ್ ನಿಯೋಜಿತ ಬಿಸಿಸಿಐನ ಆಡಳಿತ ಸಮಿತಿ (ಸಿಒಎ) ಮುಖ್ಯಸ್ಥ ವಿನೋದ್ ರೈ ಸೋಮವಾರ ಹೇಳಿದ್ದಾರೆ.

‘3 ತಿಂಗಳೊಳಗೆ ಚುನಾವಣೆ ನಡೆಸಲು ನಾವೇ ಗಡವು ವಿಧಿಸಿಕೊಂಡಿದ್ದು, ನೂತನ ಆಡಳಿತ ಮಂಡಳಿ ರಚನೆಯಾದ ಬಳಿಕ ಸಿಒಎ ನಿರ್ಗಮಿಸಲಿದೆ. ಡೆಲ್ಲಿ ಕ್ರಿಕೆಟ್ ಸಂಸ್ಥೆ ಚುನಾವಣೆ ಬಳಿಕ ನ್ಯಾ.ವಿಕ್ರಮ್‌ಜೀತ್ ಸೆನ್ ಅನುಸರಿಸಿದ ಕ್ರಮವನ್ನೇ ನಾವು ಅನುಸರಿಸುತ್ತಿದ್ದೇವೆ. ಬಿಸಿಸಿಐನಲ್ಲಿ ಹೆಚ್ಚು ಪಾರದರ್ಶಕತೆಯನ್ನು ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇವೆ’ ಎಂದು ರೈ ಹೇಳಿದ್ದಾರೆ. ನವೆಂಬರ್ ಅಂತ್ಯದ ವೇಳೆ ಬಿಸಿಸಿಐ ವಾರ್ಷಿಕ ಸಭೆ ಹಾಗೂ ಚುನಾವಣೆನಡೆಯಲಿದೆ ಎಂದು ರೈ ಹೇಳಿದ್ದಾರೆ.

ರಾಜ್ಯ ಕ್ರಿಕೆಟ್ ಸಂಸ್ಥೆಗಳು ಮೊದಲು ಬಿಸಿಸಿಐನ ನೂತನ ಸಂವಿಧಾನ ಅಳವಡಿಸಿಕೊಳ್ಳಲಿ. ಆಮೇಲೆ ಎಲ್ಲವೂ ಸರಿ ಹೋಗುತ್ತದೆ. ರಾಜ್ಯ ಸಂಸ್ಥೆಗಳು, ಆಯ್ಕೆ ಸಮಿತಿ ಸದಸ್ಯ ಆಯ್ಕೆಗೆ ಅರ್ಹತೆಗೆ ಸಂಬಂಧಿಸಿದಂತೆ ಗೊಂದಲದಲ್ಲಿದ್ದು, ಬರುಬರುತ್ತಾ ಎಲ್ಲ ಗೊತ್ತಾಗುತ್ತದೆ’ ಎಂದು ರೈ ಹೇಳಿದ್ದಾರೆ.