ಐಪಿಎಲ್‌ನಿಂದ ಬಿಸಿಸಿಐಗೆ 2017 ಕೋಟಿ ರೂ. ಲಾಭ!

First Published 14, Feb 2018, 6:08 PM IST
BCCI set to earn over Rs 2000 crore from IPL
Highlights

ಬಿಸಿಸಿಐಗೆ 16 ಪಟ್ಟು ಹೆಚ್ಚು ಆದಾಯ ತಂದುಕೊಡಲಿದೆ. ಅಂದರೆ ವರ್ಷದ 320 ದಿನಗಳಲ್ಲಿ ಬರುವುದಕ್ಕಿಂತ 16 ಪಟ್ಟು ಹೆಚ್ಚು ಹಣವನ್ನು ಬಿಸಿಸಿಐ ಕೇವಲ 45 ದಿನಗಳ ಐಪಿಎಲ್‌ನಲ್ಲಿ ಗಳಿಸಲಿದೆ.

ನವದೆಹಲಿ(ಫೆ.14): 2008ರಲ್ಲಿ ಬಿಸಿಸಿಐ ಪ್ರಾಯೋಗಿಕವಾಗಿ ಆರಂಭಿಸಿದ ಐಪಿಎಲ್ ಟಿ20, ಇಂದು ಬಿಸಿಸಿಐ ಬೊಕ್ಕಸಕ್ಕೆ ಕೋಟಿ ಕೋಟಿ ತುಂಬಿಸುತ್ತಿದೆ. ವರದಿಗಳ ಪ್ರಕಾರ, ಈ ವರ್ಷದ ಐಪಿಎಲ್‌ನಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬರೋಬ್ಬರಿ 2017 ಕೋಟಿ ರೂ. ಕೋಟಿ ಉಳಿತಾಯ ಮಾಡಲಿದೆ.

ಅಂತಾರಾಷ್ಟ್ರೀಯ, ದೇಸಿ ಕ್ರಿಕೆಟ್ ಪಂದ್ಯಾವಳಿಗಳು ಹಾಗೂ ಇನ್ನಿತರ ಮೂಲಗಳಿಂದ ಬಿಸಿಸಿಐಗೆ ಉಳಿಯುವುದು 125 ಕೋಟಿಯಾಗಿದೆ. ಈ ಮೊತ್ತಕ್ಕೆ ಹೋಲಿಸಿದರೆ ಐಪಿಎಲ್, ಬಿಸಿಸಿಐಗೆ 16 ಪಟ್ಟು ಹೆಚ್ಚು ಆದಾಯ ತಂದುಕೊಡಲಿದೆ. ಅಂದರೆ ವರ್ಷದ 320 ದಿನಗಳಲ್ಲಿ ಬರುವುದಕ್ಕಿಂತ 16 ಪಟ್ಟು ಹೆಚ್ಚು ಹಣವನ್ನು ಬಿಸಿಸಿಐ ಕೇವಲ 45 ದಿನಗಳ ಐಪಿಎಲ್‌ನಲ್ಲಿ ಗಳಿಸಲಿದೆ.

loader