ಸುಪ್ರೀಂ ಕೋರ್ಟ್'ನಿಂದ ಮಾಡಲಾದ ಅಡ್ಮಿನ್ ಕಮಿಟಿ ಹಾಗೂ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ನಡುವೆ ಕಿತ್ತಾಟ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ನಡುವೆ ಬಿಸಿಸಿಐ ಅಧಿಕಾರಿ ಒಬ್ಬರು ನೀಡಿದ ಮಾಹಿತಿ ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ನೀಡುವಂತಿದೆ. ಅಷ್ಟಕ್ಕೂ ಅವರು ನೀಡಿದ ಆ ಮಾಹಿತಿ ಏನು? ಇದು IPl ಗೆ ಹೇಗೆ ಕಂಟಕವಾಗುತ್ತೆ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

ನವದೆಹಲಿ(ಮಾ.10): ಸುಪ್ರೀಂ ಕೋರ್ಟ್'ನಿಂದ ಮಾಡಲಾದ ಅಡ್ಮಿನ್ ಕಮಿಟಿ ಹಾಗೂ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ನಡುವೆ ಕಿತ್ತಾಟ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ನಡುವೆ ಬಿಸಿಸಿಐ ಅಧಿಕಾರಿ ಒಬ್ಬರು ನೀಡಿದ ಮಾಹಿತಿ ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ನೀಡುವಂತಿದೆ. ಅಷ್ಟಕ್ಕೂ ಅವರು ನೀಡಿದ ಆ ಮಾಹಿತಿ ಏನು? ಇದು IPl ಗೆ ಹೇಗೆ ಕಂಟಕವಾಗುತ್ತೆ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

ಬಿಸಿಸಿಐ ಅಧಿಕಾರಿಯೊಬ್ಬರು 'ಈ ಬಾರಿ ಅಸೋಸಿಯೇಷನ್'ಗೆ ನೀಡಲಾಗುವ ಅನುದಾನವನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ' ಎಂದಿದ್ದಾರೆ. ಹೀಗೆ ಆಗಿದ್ದೇ ಆದಲ್ಲಿ ಈ ಬಾರಿ IPL ನಡೆಯುವುದು ಅನುಮಾನ. ಇನ್ನು IPL ನಡೆಯದಿದ್ದರೆ ಬಿಸಿಸಿಐ 2500 ಕೋಟಿಯಷ್ಟು ನಷ್ಟ ಅನುಭವಿಸಬೇಕಾಗುತ್ತದೆ.

ಮಾಧ್ಯಮಗಳಲ್ಲಿ ಬಿತ್ತರಿಸಿದ ವರದಿಯನ್ವಯ ಕ್ರಿಕೆಟ್ ಅಸೋಸಿಯೇಷನ್'ಗೆ IPLನ ಒಂದು ಪಂದ್ಯಕ್ಕಾಗಿ 60 ಲಕ್ಷ ನೀಡಲಾಗುತ್ತದೆ. ಇದರಲ್ಲಿ 30 ಲಕ್ಷ BCCI ನಿಂದ ಕೊಡಲಾಗುತ್ತದೆ ಹಾಗೂ ಇನ್ನುಳಿದ ಹಣ ಫ್ರಾಂಚೈಸಿ ನೀಡುತ್ತದೆ. ಅಸೋಸಿಯೇಷನ್ ಈ ಹಣದಲ್ಲಿ ಆಟ, ಅಭ್ಯಾಸ, ಲೈಟಿಂಗ್ ಹಾಗೂ ಮೈದಾನದ ನಿರ್ವಹಣೆ ಹಾಗೂ ಸಿಬ್ಬಂದಿಗಳಿಗಾಗಿ ಖರ್ಚು ಮಾಡಲಾಗುತ್ತದೆ. ಕಳೆದ ಕೆಲ ವರ್ಷಗಳಿಂದ ಅಸೋಸಿಯೇಷನ್'ಗಳಿಗೆ ಬೋರ್ಡ್'ನಿಂದ ಇದಕ್ಕಾಗಿ ಅಡ್ವಾನ್ಸ್ ಹಾಗೂ ಬ್ಯಾಲೆನ್ಸ್ ಹಣವನ್ನು ನೀಡುತ್ತಾ ಬಂದಿದ್ದರು. ಆದರೆ ಈ ಬಾರಿ ವ್ಯವಸ್ಥೆ ಮೊದಲಿನಂತಿಲ್ಲ.

ಏನಾಗಿದೆ?

ಲೋಧಾ ಕಮಿಟಿ ಮಾಡಿದ ಶಿಫಾರಸ್ಸುಗಳನ್ನು ಕ್ರಿಕೆಟ್ ಅಸೋಸಿಯೇಷನ್'ಗಳು ಪಾಲಿಸುವವರೆಗೂ ಬಿಸಿಸಿಐನಿಂದ ಯಾವುದೇ ಅನುದಾನವನ್ನು ಬಿಡುಗಡೆ ಮಾಡಲಾಗುವುದಿಲ್ಲ ಎಂಬ ಮಹತ್ವದ ಆದೇಶವನ್ನು ಕಳೆದ ವರ್ಷ ಸುಪ್ರೀಂ ಕೋರ್ಟ್ ಹೊರಡಿಸಿತ್ತು.

ನ್ಯೂಜಿಲ್ಯಾಂಡ್, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾದ ವಿರುದ್ಧ ನಡೆದ ಟೆಸ್ಟ್, ಏಕದಿನ ಹಾಗೂ ಟಿ-20 ಸೀರೀಸ್ ನಡೆದ ಸಂದರ್ಭದಲ್ಲಿ 'ನಾವು ಇಷ್ಟು ಹಣವನ್ನು ವ್ಯಯಿಸಲು ಅಶಕ್ತರು' ಎಂದು ಕ್ರಿಕೆಟ್ ಅಸೋಸಿಯೇಷನ್ ತಿಳಿಸಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಅನುದಾನ ಬಿಡುಗಡೆ ಮಾಡಿತ್ತು. ಆದರೆ IPL ನಡೆಯುವ ವೇಳೆ ಹೀಗಾಗಬಹುದು ಎಂದು ಬಯಸಲು ಸಾಧ್ಯವಿಲ್ಲ.

ಕೃಪೆ: ಆಜ್ ತಕ್ ನ್ಯೂಸ್