ಶಮಿಗೆ ಮತ್ತೆ ಸಂಕಷ್ಟ..? ದುಬೈಗೆ ಶಮಿ ಭೇಟಿ ನೀಡಿದ್ದು ಹೌದು ಎಂದ ಬಿಸಿಸಿಐ

First Published 21, Mar 2018, 12:07 AM IST
BCCI Letter Confirms Shami Was in Dubai for Two Days in February
Highlights

ಬಿಸಿಸಿಐ ಕೂಡಾ ಶಮಿ ದುಬೈನಲ್ಲಿದ್ದರು ಎಂದು ದೃಢಪಡಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ನಿನ್ನೆಯಷ್ಟೇ ಪಾಕ್ ಯುವತಿ ಅಲಿಶ್ಬಾ ಕೂಡಾ ಶಮಿಯನ್ನು ದುಬೈನಲ್ಲಿ ಭೇಟಿಯಾಗಿರುವುದಾಗಿ ತಿಳಿಸಿದ್ದರು.

ನವದೆಹಲಿ(ಮಾ.21): ಮೊಹಮ್ಮದ್ ಶಮಿ ಕುರಿತ ಟ್ವಿಸ್ಟ್'ಗಳಿಗೆ ಕೊನೆ ಯಾವಾಗ ಎಂದು ತಿಳಿಯುತ್ತಿಲ್ಲ. ಫೆಬ್ರವರಿಯಲ್ಲಿ 2 ದಿನ ಶಮಿ ದುಬೈನಲ್ಲಿದ್ದರು ಎಂದು ಬಿಸಿಸಿಐ ಕೊಲ್ಕತ್ತಾ ಪೊಲೀಸರಿಗೆ ತಿಳಿಸಿದ್ದಾರೆ.

ಶಮಿ ಫೆ.17 ಮತ್ತು 18ರಂದು ದುಬೈನ ಹೋಟೆಲ್‌ವೊಂದರಲ್ಲಿ ತಂಗಿದ್ದರು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೋಲ್ಕತಾ ಪೊಲೀಸರಿಗೆ ಪತ್ರದಲ್ಲಿ ತಿಳಿಸಲಾಗಿದೆ.

ಹಸೀನ್ ಜಹಾನ್ ತಮ್ಮ ಪತಿ ಶಮಿ ಆಫ್ರಿಕಾ ಪ್ರವಾಸದಿಂದ ಹಿಂದಿರುಗುವಾಗ ದುಬೈ ಭೇಟಿ ನೀಡಿದ್ದರು ದೂರಿನಲ್ಲಿ ತಿಳಿಸಿದ್ದರು. ಇದೀಗ ಬಿಸಿಸಿಐ ಕೂಡಾ ಶಮಿ ದುಬೈನಲ್ಲಿದ್ದರು ಎಂದು ದೃಢಪಡಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ನಿನ್ನೆಯಷ್ಟೇ ಪಾಕ್ ಯುವತಿ ಅಲಿಶ್ಬಾ ಕೂಡಾ ಶಮಿಯನ್ನು ದುಬೈನಲ್ಲಿ ಭೇಟಿಯಾಗಿರುವುದಾಗಿ ತಿಳಿಸಿದ್ದರು.

 

loader