Asianet Suvarna News Asianet Suvarna News

ಆಹ್ವಾನ ನೀಡಿ ತ್ರಿಮೂರ್ತಿಗಳಿಗೆ ಅವಮಾನ: ಮನೆಯಲ್ಲಿದ್ದ ಕ್ರಿಕೆಟ್ ದಿಗ್ಗಜರನ್ನು ತಂದು ಬೀದಿಗೆ ಬಿಟ್ಟ ಬಿಸಿಸಿಐ

ಮನೆಯಲ್ಲಿ ಸುಮ್ಮನೆ ಕೂತರವನ್ನ ಕರೆಸಿ ಅವಮಾನ ಮಾಡುವುದು ಅಂದರೆ ಇದೇ ಅನಿಸುತ್ತೆ. ರಿಟೈರ್ಡ್​ ಆದ ಬಳಿಕ ಮೂವರು ಕ್ರಿಕೆಟರ್ಸ್ ತಾವಾಯಿತು ತಮ್ಮ ಕೆಲಸವಾಯಿತು ಅಂತ ಸುಮ್ಮನಿದ್ದರು. ಆದರೆ ಬಿಸಿಸಿಐನಲ್ಲಿ ಆಹ್ವಾನ ನೀಡಿ ಅವಮಾನ ಮಾಡಿದೆ. ದಿಗ್ಗಜ ಕ್ರಿಕೆಟರ್ಸ್'​ಗೆ ತೀವ್ರ ಮುಖಭಂಗವಾಗಿದೆ. ಇದರಿಂದ ಅವರು ಬಿಸಿಸಿಐ ವಿರುದ್ಧ ಗರಂ ಆಗಿದ್ದಾರೆ.

BCCI Insulting These Three Cricket Legends

ಮುಂಬೈ(ಜು.16): ಮನೆಯಲ್ಲಿ ಸುಮ್ಮನೆ ಕೂತರವನ್ನ ಕರೆಸಿ ಅವಮಾನ ಮಾಡುವುದು ಅಂದರೆ ಇದೇ ಅನಿಸುತ್ತೆ. ರಿಟೈರ್ಡ್​ ಆದ ಬಳಿಕ ಮೂವರು ಕ್ರಿಕೆಟರ್ಸ್ ತಾವಾಯಿತು ತಮ್ಮ ಕೆಲಸವಾಯಿತು ಅಂತ ಸುಮ್ಮನಿದ್ದರು. ಆದರೆ ಬಿಸಿಸಿಐನಲ್ಲಿ ಆಹ್ವಾನ ನೀಡಿ ಅವಮಾನ ಮಾಡಿದೆ. ದಿಗ್ಗಜ ಕ್ರಿಕೆಟರ್ಸ್'​ಗೆ ತೀವ್ರ ಮುಖಭಂಗವಾಗಿದೆ. ಇದರಿಂದ ಅವರು ಬಿಸಿಸಿಐ ವಿರುದ್ಧ ಗರಂ ಆಗಿದ್ದಾರೆ.

ಆಹ್ವಾನ ನೀಡಿ ತ್ರಿಮೂರ್ತಿಗಳಿಗೆ ಅವಮಾನ ಮನೆಯಲ್ಲಿದ್ದ ಕ್ರಿಕೆಟ್ ದಿಗ್ಗಜರನ್ನು ತಂದು ಬೀದಿಗೆ ಬಿಟ್ಟ ಬಿಸಿಸಿಐ

ಬಿಸಿಸಿಐನಲ್ಲಿ ಎಲ್ಲವೂ ಗೊಂದಲದ ಗೂಡಾಗಿದೆ. ಯಾರು ಏನು ಮಾಡುತ್ತಿದ್ದಾರೆ. ಯಾರು ಹೇಳುವುದು ನಿಜ. ಯಾರು ಹೇಳುವುದು ಸುಳ್ಳು ಎನ್ನುವುದೇ ಗೊತ್ತಾಗುತ್ತಿಲ್ಲ. ಈ ಮೂವರು ಭಾರತೀಯ ಕ್ರಿಕೆಟ್'​​ನ ದಿಗ್ಗಜರು. ರಿಟೈರ್ಡ್​ ಆದ ಬಳಿಕ ಕ್ರಿಕೆಟ್'​ಗಾಗಿ ಅಳಿಲು ಸೇವೆ ಮಾಡುತ್ತಿದ್ದರು. ನಿಮ್ಮ ಸೇವೆ ಬಿಸಿಸಿಐಗೂ ಬೇಕು ಅಂತ ಅವರನ್ನ ಸಲಹಾ ಸಮಿತಿ ಸದಸ್ಯನ್ನಾಗಿ ಮಾಡಲಾಯಿತು. ನೀವು ಕೊಟ್ಟ ಸಲಹೆಗಳನ್ನು ಬಿಸಿಸಿಐ ಸ್ವೀಕರಿಸುತ್ತೆ ಅಂತ ಹೇಳಲಾಯಿತು. ಮನೆಯಲ್ಲಿ ಮರ್ಯಾದೆಯಲ್ಲಿದ್ದವರನ್ನು ಬಿಸಿಸಿಐ ಕಚೇರಿಗೆ ತಂದು ಬೀಡಲಾಯ್ತು. ಈಗ ಅವರನ್ನ ಬೀದಿ ಬಿಟ್ಟು ಸುಮ್ಮನೆ ಕೂತಿದೆ ಬಿಸಿಸಿಐ.

ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಸಲಹಾ ಸಮಿತಿಯನ್ನು ಬಿಸಿಸಿಐ ರಚಿಸಿತ್ತು. ಅವರು ಕೊಡುವ ಸಲಹೆಗಳನ್ನು ಜಾರಿಗೆ ತರುವಾಗಿಯೂ ಹೇಳಿತ್ತು. ಆದರೆ ಈಗ ಮಾಡುತ್ತಿರುವುದಾದರೂ ಏನು. ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ಮಾತು ಕೇಳಿಕೊಂಡು ದಿಗ್ಗಜ ಕ್ರಿಕೆಟರ್ಸ್​ಗೆ ಅವಮಾನ ಮಾಡಿದೆ. ಆ ಅವಮಾನ ತಾಳಲಾರದೆ ಈ ತ್ರಿಮೂರ್ತಿಗಳು ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ.

ಈಗ ಜ್ಯಾಕ್ ಕೇವಲ ಬೌಲಿಂಗ್ ಸಲಹೆಗಾರ ಆಗಿದ್ದೇಗೆ..?

ರವಿಶಾಸ್ತ್ರಿ ಟೀಂ ಇಂಡಿಯಾ ಚೀಫ್ ಕೋಚ್. ಜಹೀರ್ ಖಾನ್ ಬೌಲಿಂಗ್ ಕೋಚ್. ಸಂಜಯ್ ಬಂಗಾರ್ ಬ್ಯಾಟಿಂಗ್ ಮತ್ತು ಶ್ರೀಧರ್ ಫೀಲ್ಡಿಂಗ್ ಕೋಚ್ ಎಂದು ಸಲಹಾ ಸಮಿತಿ ಹೇಳಿತ್ತು. ಹಾಗೆ ರಾಹುಲ್ ದ್ರಾವಿಡ್ ವಿದೇಶಿ ಸರಣಿ ವೇಳೆ ಬ್ಯಾಟಿಂಗ್ ಸಲಹೆಗಾರರಾಗಿ ಕೆಲ್ಸ ಮಾಡಲಿದ್ದಾರೆ ಅಂತ ಹೇಳಲಾಗಿತ್ತು. ಆದರೆ ಈಗ ಎಲ್ಲವೂ ಉಲ್ಟಾ ಆಗಿ ಹೋಗಿದೆ. ಭರತ್ ಅರುಣ್ ಬೌಲಿಂಗ್ ಕೋಚ್ ಮಾಡಿ ಅಂತ ರವಿಶಾಸ್ತ್ರಿ ಬಿಸಿಸಿಐಗೆ ದುಂಬಾಲು ಬಿದ್ದಿದ್ದಾರೆ. ಈ ಬೆನ್ನಲ್ಲೇ ಜ್ಯಾಕ್ ಬೌಲಿಂಗ್ ಕೋಚ್ ಅಲ್ಲ. ಅವರೂ ಸಹ ದ್ರಾವಿಡ್ ರೀತಿ ಕೇವಲ ಸಲಹೆಗಾರ ಅಂತ ಬಿಸಿಸಿಐ ಹೇಳಿದೆ. ಅಲ್ಲಿಗೆ ಸಲಹಾ ಸಮಿತಿ ಮಾತಿಗೆ ಕಿಮ್ಮತ್ತು ಬೆಲೆ ಇಲ್ಲ. ಅವರನ್ನ ಅವಮಾನಿಸಿದೆ. ಇಷ್ಟೆಲ್ಲಾ ರದ್ದಾಂತಕ್ಕೆ ಕಾರಣವಾದ ಕ್ರಿಕೆಟ್ ಆಡಳಿತ ಸಮಿತಿ ವಿರುದ್ಧ ತ್ರಿಮೂರ್ತಿಗಳು ಗರಂ ಆಗಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿ ಅಂತ ಪತ್ರವನ್ನೂ ಬರೆದಿದ್ದಾರೆ.

ಅಂದು ದಾದಾ ದಿನ.. ಇಂದು ಶಾಸ್ತ್ರಿ ದಿನ..: ಸೇಡಿಗೆ ಸೇಡು.. ಮುಯ್ಯಿಗೆ ಮುಯ್ಯಿ..

ಕಳೆದ ವರ್ಷ ಕೋಚ್​ ಸಂದರ್ಶನದ ಸಂದರ್ಭದಲ್ಲಿ ರವಿಶಾಸ್ತ್ರಿಗೆ ಸೌರವ್ ಗಂಗೂಲಿ ತೀವ್ರ ಮುಖಭಂಗ ಮಾಡಿದ್ದರು. ಬಾಯಿಗೆ ಬಂದ ಹಾಗೆ ಮಾತನಾಡಿದ್ದರು. ಇದೇ ಸೇಡು ಇಟ್ಟುಕೊಂಡಿದ್ದ ಶಾಸ್ತ್ರಿ ಈಗ ಸೇಡು ತೀರಿಸಿಕೊಳ್ತಿದ್ದಾರೆ. ಸಚಿನ್​-ಕೊಹ್ಲಿ ಹಿಡಿದುಕೊಂಡು ಕೋಚ್ ಆದ ಶಾಸ್ತ್ರಿ, ಈಗ ಗಂಗೂಲಿ ವಿರುದ್ಧ ಸೇಡು ತೀರಿಸಿಕೊಳ್ತಿದ್ದಾರೆ. ಜಹೀರ್ ಖಾನ್ ನೇಮಿಸಿದ್ದು ದಾದಾ. ಈಗ ಅದೇ ಜ್ಯಾಕ್​ನನ್ನ ಕೇವಲ ಬೌಲಿಂಗ್ ಸಲಹೆಗಾರನಾಗಿ ಮಾಡಿ ತಮ್ಮ ಆಪ್ತಮಿತ್ರ ಭರತ್ ಅರುಣ್​ನನ್ನ ಬೌಲಿಂಗ್ ಕೋಚ್ ಮಾಡಲು ಶಾಸ್ತ್ರಿ ಕಸರತ್ತು ಮಾಡ್ತಿದ್ದಾರೆ. ಇದರಲ್ಲಿ ಅವರು ಸಕ್ಸಸ್ ಸಹ ಆಗುವ ಎಲ್ಲಾ ಅವಕಾಶಗಳಿವೆ.

ಕೊಹ್ಲಿ-ಶಾಸ್ತ್ರಿ ಕೈಯಲ್ಲಿ ಭಾರತೀಯ ಕ್ರಿಕೆಟ್​

ಏನೋ ಅಧಿಕಾರ ಇದೆ ಅಂತ ಕೊಹ್ಲಿ-ಶಾಸ್ತ್ರಿ ಸೇರಿಕೊಂಡು ಎಲ್ಲರನ್ನ ಬುಗುರಿ ಆಡಿಸಿದ ಹಾಗೆ ಆಡಿಸ್ತಿದ್ದಾರೆ. ಈಗ ತಮ್ಮ ಪಟಾಲಂ ರೆಡಿ ಮಾಡಿಕೊಳ್ತಿದ್ದಾರೆ. ತಮಗೆ ಬೇಕಾದ ಸಹಾಯಕ ಸಿಬ್ಬಂದಿಯನ್ನೂ ಸೆಲೆಕ್ಟ್ ಮಾಡಿಕೊಳ್ತಿದ್ದಾರೆ. ತಮ್ಮ ಮಾತೇ ವೇದವಾಕ್ಯವಾಗಬೇಕು ಅನ್ನೋ ಹಾಗೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಭವಿಷ್ಯದಲ್ಲಿ ಇವರಿಬ್ಬರಿಗೆ ಮಾರಿ ಹಬ್ಬ ಕಾದಿದೆ. ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡದಿದ್ದರೆ ಒಬ್ಬರು ನಾಯಕನ ಸ್ಥಾನ ಕಳೆದುಕೊಳ್ಳುತ್ತಾರೆ. ಇನ್ನೊಬ್ಬರಿ ಕೋಚ್ ಸ್ಥಾನ ಕಳೆದುಕೊಳ್ತಾರೆ. ನೆನಪಿರಲಿ ಶಾಸ್ತ್ರಿ ಅಂಡ್ ಕೊಹ್ಲಿ.

Follow Us:
Download App:
  • android
  • ios