ಕ್ರಿಕೆಟ್ ಸಂಸ್ಥೆಗೆ ಹೊಸದಾಗಿ ಚುನಾವಣೆ ನಡೆಯುವವರೆಗೂ ಈ ನಾಲ್ವರು ಸದಸ್ಯರನ್ನೊಳಗೊಂಡ ತಂಡ ಆಡಳಿತ ನಡೆಸಲಿದೆ ಎಂದು ಸರ್ವೋಚ್ಚ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ನವದೆಹಲಿ(ಜ.30): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ನೂತನ ಆಡಳಿತ ಮಂಡಳಿಯನ್ನು ಸುಪ್ರೀಂ ಕೋರ್ಟ್ ರಚಿಸಿದ್ದು, ಮಾಜಿ ಮಹಾಲೆಕ್ಕಪರಿಶೋಧಕ ವಿನೋದ್ ರೈ ಅವರನ್ನು ಬಿಸಿಸಿಐನ ತಾತ್ಕಾಲಿಕ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಸುಪ್ರೀಂ ಕೋರ್ಟ್ ತಾತ್ಕಾಲಿಕವಾಗಿ ನಾಲ್ವರು ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿಯನ್ನು ರಚಿಸಿದ್ದು ಖ್ಯಾತ ಅಂಕಣಕಾರ ರಾಮಚಂದ್ರ ಗುಹಾ, ಮಾಜಿ ಕ್ರಿಕೆಟಿಗ ಡಯಾನಾ ಎಡುಲ್ಜಿ, ಹಾಗೂ ಐಡಿಎಫ್'ಸಿಯ ಕಾರ್ಯನಿರ್ವಾಹಕಾಧಿಕಾರಿ ವಿಕ್ರಂ ಲಿಮಾಯೆ ನೇಮಕವಾಗಿದ್ದಾರೆ.

ಲೋಧಾ ಸಮಿತಿಯ ಶಿಫಾರಸುಗಳನ್ನು ಅನುಷ್ಟಾನಗೊಳಿಸಲು ಹಾಗೂ ಬಿಸಿಸಿಐ ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್, ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಕಾರ್ಯದರ್ಶಿ ಅಜಯ್ ಶಿರ್ಕೆಯನ್ನು ವಜಾಗೊಳಿಸಿತ್ತು.

ಕ್ರಿಕೆಟ್ ಸಂಸ್ಥೆಗೆ ಹೊಸದಾಗಿ ಚುನಾವಣೆ ನಡೆಯುವವರೆಗೂ ಈ ನಾಲ್ವರು ಸದಸ್ಯರನ್ನೊಳಗೊಂಡ ತಂಡ ಆಡಳಿತ ನಡೆಸಲಿದೆ ಎಂದು ಸರ್ವೋಚ್ಚ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.