ಟೆಸ್ಟ್ ಆಡುವ ಅಗ್ರ 8 ರಾಷ್ಟ್ರಗಳ ಪೈಕಿ ಭಾರತ, ಶ್ರೀಲಂಕಾ ಹೊರತು ಪಡಿಸಿ ಇನ್ನುಳಿದ ಎಲ್ಲಾ ರಾಷ್ಟ್ರಗಳು ಹಗಲು-ರಾತ್ರಿ ಟೆಸ್ಟ್‌'ಗೆ ಆತಿಥ್ಯ ವಹಿಸಿವೆ.

ನವದೆಹಲಿ(ಮಾ.16): ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಯೋಜನೆ ಕುರಿತು ಬಿಸಿಸಿಐ ಆಸಕ್ತಿ ತೋರಿದ್ದು, ಶೀಘ್ರದಲ್ಲೇ ಪಂದ್ಯ ಆಯೋಜನೆಗೊಳಿಸುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಧಾನ ವ್ಯವಸ್ಥಾಪಕ ಸಾಬಾ ಕರೀಂ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಹಗಲು- ರಾತ್ರಿ ಟೆಸ್ಟ್ ಪಂದ್ಯ ಆಯೋಜನೆ ಕುರಿತು ಬಿಸಿಸಿಐ ಚಿಂತನೆ ನಡೆಸಿದೆ. ಈಗಾಗಲೇ ಹಲವು ರಾಷ್ಟ್ರಗಳು ಹಗಲು-ರಾತ್ರಿ ಟೆಸ್ಟ್ ಆಯೋಜಿಸಿ ಉತ್ತಮ ಫಲಿತಾಂಶ ಕಂಡಿವೆ’ ಎಂದು ಕರೀಂ ಹೇಳಿದ್ದಾರೆ.

ಟೆಸ್ಟ್ ಆಡುವ ಅಗ್ರ 8 ರಾಷ್ಟ್ರಗಳ ಪೈಕಿ ಭಾರತ, ಶ್ರೀಲಂಕಾ ಹೊರತು ಪಡಿಸಿ ಇನ್ನುಳಿದ ಎಲ್ಲಾ ರಾಷ್ಟ್ರಗಳು ಹಗಲು-ರಾತ್ರಿ ಟೆಸ್ಟ್‌'ಗೆ ಆತಿಥ್ಯ ವಹಿಸಿವೆ.