ಮುಂಬೈ(ಫೆ.28): ಐಪಿಎಲ್ ಟೂರ್ನಿಗೆ ಬಿಸಿಸಿಐ ತಯಾರಿ ಬಹುತೇಕ ಪೂರ್ಣಗೊಂಡಿದೆ. ಮಾರ್ಚ್ 23 ರಿಂದ 12ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಟೂರ್ನಿ ಆರಂಭಕ್ಕೂ ಮುನ್ನವೇ ಭಾರತೀಯ ಕ್ರಿಕೆಟ್ ಮಂಡಳಿ(BCCI) ಐಸಿಸಿಗೆ ಶಾಕ್ ನೀಡಿದೆ. ಐಸಿಸಿ ಭ್ರಷ್ಟಾಚಾರ ನಿಗ್ರಹ ದಳದ(ACU) ಸೇವೆ ಕಡಿತಗೊಳಿಸಲು ನಿರ್ಧರಿಸಿದೆ.

ಇದನ್ನೂ ಓದಿ: ರೋಹಿತ್ ಶರ್ಮಾ ಟ್ರೋಲ್ ಮಾಡಿದ ಮುಂಬೈ ಇಂಡಿಯನ್ಸ್!

ಕಳೆದ 10 ವರ್ಷಗಳಿಂದ ಐಪಿಎಲ್ ಟೂರ್ನಿಯಲ್ಲಿ ಐಸಿಸಿ ಭ್ರಷ್ಟಾಚಾರ ನಿಗ್ರಹ ದಳದ ಸೇವೆಯನ್ನ ಉಪಯೋಗಿಸಿಕೊಂಡಿದೆ. ಇದಕ್ಕಾಗಿ ಬಿಸಿಸಿಐ ಪ್ರತಿ ಆವೃತ್ತಿಯಲ್ಲಿ ಬರೋಬ್ಬರಿ 3.1 ಕೋಟಿ ರೂಪಾಯಿ ನೀಡುತ್ತಿದೆ. ಇದೀಗ ಐಸಿಸಿ ಭ್ರಷ್ಟಾಚಾರ ನಿಗ್ರಹ ದಳದ ಬದಲು ಬಿಸಿಸಿಐ ಹೊಸ ಭ್ರಷ್ಟಾಚಾರ ನಿಗ್ರಹ ದಳ ನೇಮಕ ಮಾಡಲು ನಿರ್ಧರಿಸಿದೆ.

ಇದನ್ನೂ ಓದಿ: ಐಪಿಎಲ್ 2019ರ ವೇಳಾಪಟ್ಟಿ ಪ್ರಕಟ-ಉದ್ಘಾಟನಾ ಪಂದ್ಯದಲ್ಲಿ RCB -CSK ಫೈಟ್!

ಐಸಿಸಿ ನೇಮಕ ಮಾಡುವ ACU ದಳವನ್ನು ರದ್ದು ಮಾಡಿ, ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ ನೇಮಕ ಮಾಡಿದರೆ ಹಣ ಉಳಿತಾಯವಾಗಲಿದೆ ಎಂದು ಬಿಸಿಸಿಐ CoA ಮುಖ್ಯಸ್ಥ ವಿನೋದ್ ರೈ ಹೇಳಿದ್ದಾರೆ. 12ನೇ ಆವೃತ್ತಿಯಲ್ಲಿ ಬಿಸಿಸಿಐ ನೇಮಕ ಮಾಡೋ ಭ್ರಷ್ಟಾಚಾರ ನಿಗ್ರಹ ದಳ ಕಾರ್ಯನಿರ್ವಹಸಲಿದೆ ಎಂದಿದ್ದಾರೆ.