Asianet Suvarna News Asianet Suvarna News

#Metoo ಆರೋಪ ಎದುರಿಸುತ್ತಿರೋ ಬಿಸಿಸಿಐ CEOಗೆ ಮತ್ತೆ ಹಿನ್ನಡೆ!

ಮೀಟೂ ಬಿರುಗಾಳಿಗೆ ಬಿಸಿಸಿಐ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಜೊಹ್ಲಿ ಕುರ್ಚಿ ಅಲುಗಾಡುತ್ತಿದೆ. ಇದರ ಬೆನ್ನಲ್ಲೇ  ರಾಹುಲ್ ಜೊಹ್ರಿಗೆ ಭಾರಿ ಹಿನ್ನಡೆಯಾಗಿದೆ. ಇಲ್ಲಿದೆ ರಾಹುಲ್ ಜೊಹ್ಲಿ ವಿರುದ್ಧ ಕೇಳಿಬಂದಿರುವ #Metoo ಆರೋಪದ ಅಪ್‌ಡೇಟ್ಸ್.

BCCI CEO Rahul Johri asked to skip ICC meet for Sexual assault
Author
Bengaluru, First Published Oct 16, 2018, 10:23 AM IST
  • Facebook
  • Twitter
  • Whatsapp

ಹೈದರಾಬಾದ್(ಅ.16):  ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬಿಸಿಸಿಐ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ರಾಹುಲ್ ಜೋಹ್ರಿಗೆ ಮತ್ತೊಂದು ಹಿನ್ನಡೆಯಾಗಿದೆ. ಪ್ರಕರಣದ ಕುರಿತು ವಿವರಣೆ ನೀಡಲು ಹೆಚ್ಚಿನ ಕಾಲಾವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಬಿಸಿಸಿಐ ಆಡಳಿತ ಸಮಿತಿ ತಿರಸ್ಕರಿಸಿದೆ.

ಈ ಹಿನ್ನೆಲೆಯಲ್ಲಿ ಜೋಹ್ರಿ ತಮ್ಮ ವಕೀಲರೊಂದಿಗೆ ಚರ್ಚಿಸುತ್ತಿದ್ದು ಸದ್ಯದಲ್ಲೇ ಆಡಳಿತ ಸಮಿತಿ ಮುಂದೆ ಹಾಜರಾಗಲಿದ್ದಾರೆ. ಈ ಕಾರಣ, ಮಂಗಳವಾರದಿಂದ ಸಿಂಗಾಪುರದಲ್ಲಿ ನಡೆಯಲಿರುವ ಐಸಿಸಿ ಸಭೆಗೆ ಜೋಹ್ರಿ ಗೈರಾಗಲಿದ್ದು ಅವರ ಬದಲು ಕಾರ್ಯದರ್ಶಿ ಅಮಿತಾಭ್ ಚೌಧರಿ ಬಿಸಿಸಿಐ ಅನ್ನು ಪ್ರತಿನಿಧಿಸಲಿದ್ದಾರೆ.

2016ರಿಂದ ಬಿಸಿಸಿಐನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಹುಲ್‌ ಜೋಹ್ರಿ, ಅದಕ್ಕೂ ಮುನ್ನ ಡಿಸ್ಕವರಿ ವಾಹಿನಿಯ ದಕ್ಷಿಣ ಏಷ್ಯಾ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಉದ್ಯೋಗ ಕೊಡಿಸುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಲಾಗಿದೆ.

Follow Us:
Download App:
  • android
  • ios