ಮುಂಬೈ(ನ.04): ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡದ ಖರ್ಚು-ವೆಚ್ಚಗಳನ್ನು ಭರಿಸುವಂತೆ ಬಿಸಿಸಿಐ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಕಾರ್ಯಾಚರಣೆಯ ಮುಖ್ಯಸ್ಥ ಫಿಲ್ ನೀಲೆ ಅವರಿಗೆ ಮನವಿ ಪತ್ರ ಬರೆಯಲಾಗಿದೆ.

ಇದೇ ನವೆಂಬರ್ 9 ರಿಂದ ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಈ ವೇಳೆ ಇಂಗ್ಲೆಂಡ್ ತಂಡದ ಆಟಗಾರರಿಗೆ ವಿನಿಯೋಗಿಸಲು ಇಸಿಬಿಯೇ ಹಣವನ್ನು ನೀಡಬೇಕು ಎಂದು ಬಿಸಿಸಿಐ ಹೇಳಿದೆ.

ಭಾರತದ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ತಿಳುವಳಿಕೆಯ ಸ್ಮರಣಿಕೆಯ ಅನುಸಾರದಂತೆ ಇಸಿಬಿ ನಡೆದುಕೊಳ್ಳಬೇಕಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ, ಫಿಲ್ ನೀಲೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.