ಸಾಬಾ ಕರೀಂ ಕ್ರಿಕೆಟ್ ಬದುಕು ದುರಂತ ಅಂತ್ಯ ಕಂಡಿತ್ತು. 2000ನೇ ಇಸವಿಯಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ಅನಿಲ್ ಕುಂಬ್ಳೆ ಬೌಲಿಂಗ್ ವೇಳೆ ಕೀಪಿಂಗ್ ಮಾಡುತ್ತಿದ್ದ ಕರೀಂ ಕಣ್ಣಿಗೆ ಗಾಯ ಮಾಡಿಕೊಂಡು ಕ್ರಿಕೆಟ್'ನಿಂದ ದೂರ ಉಳಿಯಬೇಕಾಗಿ ಬಂದಿತ್ತು. ಆದರೆ ಇದೀಗ ಸಾಬಾ ಕರೀಂ ಆಯ್ಕೆ ಟೀಂ ಇಂಡಿಯಾಗೆ ಸೇವೆ ಸಲ್ಲಿಸಲು ಮತ್ತೊಂದು ಅವಕಾಶ ಮಾಡಿಕೊಟ್ಟಂತೆ ಆಗಿದೆ.
ನವದೆಹಲಿ(ಡಿ.23): ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್ ಸಾಬಾ ಕರೀಂ ಅವರನ್ನು ಕ್ರಿಕೆಟ್ ಕಾರ್ಯಾಚರಣೆಯ ಪ್ರಧಾನ ವ್ಯವಸ್ಥಾಪಕರನ್ನಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೇಮಿಸಿದೆ. ಸಾಬಾ ಕರೀಂ 34 ಏಕದಿನ ಹಾಗೂ 1 ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ.
ಸೆಪ್ಟೆಂಬರ್'ನಲ್ಲಿ ಡಾ. ಎಂ.ವಿ. ಶ್ರೀಧರ್ ಈ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಬಳಿಕ ಈ ಹುದ್ದೆ ಖಾಲಿ ಉಳಿದಿತ್ತು. 50 ರ ವಯೋಮಾನದ ಸಾಬಾ ಕರೀಂ ಜನವರಿ 1, 2018 ರಿಂದ ಅಧಿಕಾರ ಸ್ವೀಕರಿಸಲಿದ್ದು, ಬಿಸಿಸಿಐ ಸಿಇಒ ರಾಹುಲ್ ಜೂಹ್ರಿ ಅವರಿಗೆ ವರದಿ ಮಾಡಿಕೊಳ್ಳಲಿದ್ದಾರೆ.