ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ ಕ್ರಿಕೆಟ್ ಸರಣಿ ವೇಳಾ ಪಟ್ಟಿ ಪ್ರಕಟಗೊಂಡಿದೆ. ನೂತನ ವೇಳಾ ಪಟ್ಟಿ ಪ್ರಕಾರ ಟೀಂ ಇಂಡಿಯಾ ಬಿಡುವಿಲ್ಲದ ಸರಣಿ ಆಡಲಿದೆ. ಇಲ್ಲಿದೆ ವೇಳಾಪಟ್ಟಿ 

ಮುಂಬೈ(ಸೆ.04): ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಅಂತಿಮ ಘಟ್ಟ ತಲುಪಿದೆ. ಸೆಪ್ಟೆಂಬರ್ 7 ರಿಂದ ಇಂಗ್ಲೆಂಡ್ ವಿರದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ. ಬಳಿಕ ಟೀಂ ಇಂಡಿಯಾ ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್ ಟೂರ್ನಿಗೆ ತೆರಳಲಿದೆ.

ಏಷ್ಯಾಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ, ವೆಸ್ಟ್ಇಂಡೀಸ್ ವಿರುದ್ಧ ಸರಣಿ ಆಡಲಿದೆ. ಇದೀಗ ಬಿಸಿಸಿಐ ವಿಂಡೀಸ್ ವಿರುದ್ಧದ 2 ಟೆಸ್ಟ್, 5 ಏಕದಿನ ಹಾಗೂ 3 ಟಿ20 ಪಂದ್ಯದ ಸರಣಿ ವೇಳಾ ಪಟ್ಟಿ ಪ್ರಕಟಿಸಿದೆ.

ಅಕ್ಟೋಬರ್ 4 ರಿಂದ ವೆಸ್ಟ್ಇಂಡೀಸ್ ವಿರುದ್ಧದ ಸರಣಿ ಆರಂಭಗೊಳ್ಳಲಿದೆ. 2 ಟೆಸ್ಟ್, 5 ಏಕದಿನ ಹಾಗೂ 3 ಟಿ20 ಪಂದ್ಯದ ಸರಣಿ ನವೆಂಬರ್ 11 ರಂದು ಅಂತ್ಯಗೊಳಲ್ಳಲಿದೆ. ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.

ಭಾರತ-ವೆಸ್ಟ್ಇಂಡೀಸ್ ಟೆಸ್ಟ್ ಸರಣಿ

ಟೆಸ್ಟ್ ದಿನಾಂಕಕ್ರೀಡಾಂಗಣ
14-8 ಅಕ್ಟೋಬರ್ರಾಜ್‌ಕೋಟ್
212-16 ಕ್ಟೋಬರ್ಹೈದರಬಾದ್

ಭಾರತ-ವೆಸ್ಟ್ಇಂಡೀಸ್ ಏಕದಿನ ಸರಣಿ

ಏಕದಿನದಿನಾಂಕಕ್ರೀಡಾಂಗಣ
1ಅ.21ಗುವ್ಹಾಟಿ
2ಅ.24ಇಂದೋರ್
3ಅ.27ಪುಣೆ
4ಅ.29ಮುಂಬೈ
5ನ.01ತಿರುವನಂತಪುರಂ

ಭಾರತ-ವೆಸ್ಟ್ಇಂಡೀಸ್ ಟಿ20 ಸರಣಿ

ಟಿ20 ದಿನಾಂಕಕ್ರೀಡಾಂಗಣ
1ನ.04ಕೋಲ್ಕತ್ತ
2ನ.06ಲಕ್ನೋ
3ನ.11ಚೆನ್ನೈ