ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ಹಾಗೂ ಗುಜರಾತ್‌ ಲಯನ್ಸ್‌ ತಂಡಗಳನ್ನು ಸೃಷ್ಟಿಸಲಾಗಿತ್ತು.
ನವದೆಹಲಿ(ಮೇ.02): 2 ವರ್ಷ ನಿಷೇಧಕ್ಕೆ ಒಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡ, ಮುಂದಿನ ವರ್ಷ ಮತ್ತೆ ಐಪಿಎಲ್ ಪ್ರವೇಶಿಸು ವುದು ಖಚಿತವಾಗಿದೆ. ಎರಡೂ ತಂಡಗಳ ಮೇಲಿನ ನಿಷೇಧ 2018ಕ್ಕೆ ಕೊನೆಗೊಳ್ಳಲಿದ್ದು, ಮತ್ತೆ ಅವು ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿವೆ ಎಂದು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ದಿಢೀರನೇ ಎರಡೂ ತಂಡಗಳನ್ನು ನಿಷೇಧಿಸ ಬೇಕಾಗಿ ಬಂದಿದ್ದ ಹಿನ್ನೆಲೆಯಲ್ಲಿ ತಾತ್ಕಾಲಿವಾಗಿ ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ಹಾಗೂ ಗುಜರಾತ್ ಲಯನ್ಸ್ ತಂಡಗಳನ್ನು ಸೃಷ್ಟಿಸಲಾಗಿತ್ತು. ಆದರೆ ಚೆನ್ನೈ ಮತ್ತು ರಾಜಸ್ಥಾನ್ ಐಪಿಎಲ್ಗೆ ಮರಳುವುದ ರೊಂದಿಗೆ ಈ 2 ತಂಡಗಳು ತಮ್ಮ ಸ್ಥಾನ ಕಳೆದುಕೊಳ್ಳ ಲಿವೆ. ಮುಂದಿನ ವರ್ಷ ಎಲ್ಲಾ 10 ಫ್ರಾಂಚೈಸಿಗಳು ಹೊಸದಾಗಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಿ ರುತ್ತದೆ. ಐಪಿಎಲ್ ನಿಯಮ ಗಳ ಅನ್ವಯ ಮೊದಲ 10 ವರ್ಷಗಳಿಗೇ ಮಾತ್ರವೇ ಹಳೆಯ ತಂಡ ಉಳಿಸಿಕೊಳ್ಳಬಹುದಾಗಿರುತ್ತದೆ.
