ನವದೆಹಲಿ[ಮಾ.25]: 6 ವರ್ಷಗಳ ಹಿಂದೆ ಬಾಂಗ್ಲಾದೇಶದ ಕಲಾವಿದ ಸುಹಾಸ್‌ ನಹಿಯನ್‌ ಬಿಡಿಸಿದ್ದ ಬಾರ್ಸಿಲೋನಾ ಫುಟ್ಬಾಲಿಗ ಲಿಯೋನೆಲ್‌ ಮೆಸ್ಸಿ ಚಿತ್ರಕ್ಕೆ ಜೀವ ಬಂದಿದೆ.

2013ರಲ್ಲಿ ಮೆಸ್ಸಿಯನ್ನು ಹಸಿರು ಹಾಗೂ ಬಿಳಿ ಉಡುಪು ತೊಟ್ಟಎದುರಾಳಿಗಳು ನಿಯಂತ್ರಿಸಲು ಯತ್ನಿಸುತ್ತಿರುವ ಚಿತ್ರವನ್ನು ನಹಿಯನ್‌ ಬಿಡಿಸಿದ್ದರು. ಸ್ಥಳೀಯ ಕ್ರೀಡಾ ವೆಬ್‌ಸೈಟ್‌ವೊಂದರಲ್ಲಿ ಚಿತ್ರ ಪ್ರಕಟಗೊಂಡಿತ್ತು. ಆ ಚಿತ್ರಕ್ಕೆ ಹೋಲುವಂತಹ ಪ್ರಸಂಗ ಇತ್ತೀಚಿನ ಬಾರ್ಸಿಲೀನಾ-ರಿಯಲ್‌ ಬೆಟಿಸ್‌ ತಂಡದ ನಡುವಿನ ಪಂದ್ಯದಲ್ಲಿ ನಡೆಯಿತು.

ಆ ಪ್ರಸಂಗವನ್ನು ಛಾಯಾಗ್ರಾಹಕರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಕಲಾವಿದನ ಚಿತ್ರ ಹಾಗೂ ಪಂದ್ಯದ ಫೋಟೋ ಎರಡೂ ವೈರಲ್‌ ಆಗಿವೆ.