ಖುಲ್ನಾ(ಮಾ.22): ನ್ಯೂಜಿಲೆಂಡ್‌ನ ಕ್ರೈಸ್ಟ್ ಚರ್ಚ್‌ ಮಸೀದಿಯೊಂದರಲ್ಲಿ ನಡೆದ ಭಯೋತ್ವಾದಕ ದಾಳಿಯಿಂದ ಕೂದಲೆಳೆಯುವ ಅಂತರದಲ್ಲಿ ಬಾಂಗ್ಲಾದೇಶ ಕ್ರಿಕೆಟಿಗರು ಪಾರಾಗಿದ್ದರು. ಕಳೆದವಾರವಷ್ಟೇ ರಣಭೀಕರ ದಾಳಿಯಂದ ತಪ್ಪಿಸಿಕೊಂಡ ಬಾಂಗ್ಲಾ ಸ್ಪಿನ್ನರ್ ಮೆಹದಿ ಹಸನ್ ಶುಕ್ರವಾರ(ಮಾ.22) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: ಮಸೀದಿಯಲ್ಲಿ ಶೂಟೌಟ್: ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗರು..!

ಮೆಹದಿ ಹಸನ್ ಬಹುಕಾಲದ ಗೆಳತಿ ರುಬೆಯಾ ಅಕ್ತರ್ ಪ್ರಿತಿ(Rabeya Akhter Priti) ಕೈಹಿಡಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂತಸವನ್ನು ಹಂಚಿಕೊಂಡಿರುವ ಮೆಹದಿ, ಹೊಸ ಬದುಕು ಆರಂಭಿಸುತ್ತಿದ್ದೇನೆ, ಅಭಿಮಾನಿಗಳು ಹರಸಬೇಕು ಎಂದಿದ್ದಾರೆ.

ಇದನ್ನೂ ಓದಿ: 2019ರ ವಿಶ್ವಕಪ್ ವರೆಗೆ ಬಾಂಗ್ಲಾದೇಶ ತಂಡಕ್ಕೆ ಕನ್ನಡಿಗ ಕೋಚ್!

ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್ ಕೂಡ ಇದೇ ವಾರವೇ ಮದುವೆಯಾಗಬೇಕಿತ್ತು. ಆದರೆ ಭಯೋತ್ಪಾದಕ ದಾಳಿಯಿಂದ ಬೆಚ್ಚಿ ಬಿದ್ದಿರುವ ಮುಸ್ತಾಫಿಜುರ್ ವಿಶ್ರಾಂತಿಗೆ ಜಾರಿದ್ದಾರೆ. ಶೀಘ್ರದಲ್ಲೇ ಮದುವೆ ದಿನಾಂಕ ಬಹಿರಂಗ ಪಡಿಸುವದಾಗಿ ಮುಸ್ತಾಫಿಜುರ್ ಸಂಬಧಿಕರು ಹೇಳಿದ್ದಾರೆ.