Asianet Suvarna News Asianet Suvarna News

ಆಸೀಸ್'ಗೆ ಬಾಂಗ್ಲಾ ಶಾಕ್; ಮೊದಲ ಟೆಸ್ಟ್'ನಲ್ಲಿ ಟೈಗರ್'ಗೆ ಕಾಂಗರೂ ಬಲಿ

ಆಸ್ಟ್ರೇಲಿಯಾ ವಿರುದ್ಧ ಇದು ಮೊದಲ ಗೆಲುವಾದರೂ ಒಟ್ಟಾರೆ ಬಾಂಗ್ಲಾಗೆ ಇದು 10ನೇ ಗೆಲುವಾಗಿದೆ. ಕಳೆದ ವರ್ಷದ ಅಕ್ಟೋಬರ್ 30ರಂದು ಇದೇ ಮೀರ್'ಪುರದಲ್ಲಿ ಇಂಗ್ಲೆಂಡ್ ವಿರುದ್ಧ ಬಾಂಗ್ಲಾ ಹುಲಿಗಳು 108 ರನ್'ಗಳಿಂದ ಜಯಭೇರಿ ಭಾರಿಸಿದ್ದವು. ಜಿಂಬಾಬ್ವೆ ವಿರುದ್ಧ 5, ವೆಸ್ಟ್ ಇಂಡೀಸ್ ವಿರುದ್ಧ 2 ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಇಂಗ್ಲೆಂಡ್, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ತಲಾ ಒಂದೊಂದು ಪಂದ್ಯ ಜಯಿಸಿದೆ. ಭಾರತ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶಕ್ಕೆ ಇನ್ನೂ ಟೆಸ್ಟ್ ಗೆಲುವು ದಕ್ಕಿಲ್ಲ.

bangladesh beat australia by 20 runs in first test at mirpur

ಮೀರ್'ಪುರ್(ಆ. 30): ವಿಶ್ವ ಕ್ರಿಕೆಟ್'ನ ಹೊಸ ಹೀರೋಗಳಾಗುತ್ತಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡ ಈಗ ಹೊಸ ಇತಿಹಾಸ ಸೃಷ್ಟಿಸಿದೆ. ಪ್ರಬಲ ಆಸ್ಟ್ರೇಲಿಯಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ 20 ರನ್'ಗಳಿಂದ ರೋಚಕ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾಗೆ ಸಿಕ್ಕ ಚೊಚ್ಚಲ ಟೆಸ್ಟ್ ಗೆಲುವಾಗಿದೆ. ಹಿರಿಯ ಆಟಗಾರ ಶಾಕಿಬ್ ಅಲ್ ಹಸನ್ ಅವರು ಈ ಗೆಲುವಿನ ರೂವಾರಿಯಾಗಿದ್ದಾರೆ. ಪಂದ್ಯದ ನಾಲ್ಕನೇ ದಿನದಂದು ಗೆಲ್ಲಲು 265 ರನ್ ಗುರಿ ಪಡೆದಿದ್ದ ಆಸ್ಟ್ರೇಲಿಯಾ ಒಂದು ಹಂತದಲ್ಲಿ 2 ವಿಕೆಟ್ ನಷ್ಟಕ್ಕೆ 150 ರನ್ ಗಡಿ ದಾಟಿತ್ತು. ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ ಅವರು ಕಾಂಗರೂಗಳ ಪಡೆಯನ್ನು ಗೆಲುವಿನ ಗಡಿ ದಾಟಿಸುವುದು ಖಚಿತ ಎಂಬಂತಿತ್ತು. ಆದರೆ, ಶಾಕಿಬ್ ಬೌಲಿಂಗ್'ನಲ್ಲಿ ವಾರ್ನರ್ ಎಲ್'ಬಿಡ್ಲ್ಯೂಗೆ ಬಲಿಯಾಗುತ್ತಿದ್ದಂತೆಯೇ ಕಾಂಗರೂಗಳ ಪತನ ಆರಂಭವಾಯಿತು. 86 ರನ್ ಅಂತರದಲ್ಲಿ 8 ವಿಕೆಟ್'ಗಳು ಉದುರಿದವು. ಬಾಲಂಗೋಚಿಗಳ ಪೈಕಿ ಪ್ಯಾಟ್ ಕುಮಿನ್ಸ್ ಅಜೇಯ 33 ರನ್ ಗಳಿಸಿ ಸ್ವಲ್ಪ ಪ್ರತಿರೋಧ ತೋರಿದರು. ಶಾಕಿಬ್ 5 ವಿಕೆಟ್ ಕಬಳಿಸಿದರು. ಈ ಪಂದ್ಯದಲ್ಲಿ ಅವರು ಗಳಿಸಿದ ವಿಕೆಟ್'ಗಳ ಸಂಖ್ಯೆ ಹತ್ತಕ್ಕೇರಿತು. ಬ್ಯಾಟಿಂಗ್'ನಲ್ಲಿ ಮೊದಲ ಇನ್ನಿಂಗ್ಸಲ್ಲಿ ಶಾಕಿಬ್ 84 ರನ್ ಭಾರಿಸಿದ್ದರು.

ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾ 1-0 ಮುನ್ನಡೆ ಪಡೆದುಕೊಂಡಿದೆ. ಎರಡನೇ ಟೆಸ್ಟ್ ಪಂದ್ಯ ಸೆಪ್ಟೆಂಬರ್ 8ರಂದು ನಡೆಯಲಿದೆ.

ಆಸ್ಟ್ರೇಲಿಯಾ ವಿರುದ್ಧ ಇದು ಮೊದಲ ಗೆಲುವಾದರೂ ಒಟ್ಟಾರೆ ಬಾಂಗ್ಲಾಗೆ ಇದು 10ನೇ ಗೆಲುವಾಗಿದೆ. ಕಳೆದ ವರ್ಷದ ಅಕ್ಟೋಬರ್ 30ರಂದು ಇದೇ ಮೀರ್'ಪುರದಲ್ಲಿ ಇಂಗ್ಲೆಂಡ್ ವಿರುದ್ಧ ಬಾಂಗ್ಲಾ ಹುಲಿಗಳು 108 ರನ್'ಗಳಿಂದ ಜಯಭೇರಿ ಭಾರಿಸಿದ್ದವು. ಜಿಂಬಾಬ್ವೆ ವಿರುದ್ಧ 5, ವೆಸ್ಟ್ ಇಂಡೀಸ್ ವಿರುದ್ಧ 2 ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಇಂಗ್ಲೆಂಡ್, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ತಲಾ ಒಂದೊಂದು ಪಂದ್ಯ ಜಯಿಸಿದೆ. ಭಾರತ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶಕ್ಕೆ ಇನ್ನೂ ಟೆಸ್ಟ್ ಗೆಲುವು ದಕ್ಕಿಲ್ಲ.

ಸ್ಕೋರು ವಿವರ:

ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ 78.5 ಓವರ್ 260 ರನ್ ಆಲೌಟ್

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 74.5 ಓವರ್ 217 ರನ್ ಆಲೌಟ್

ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್ 79.3 ಓವರ್ 221 ರನ್ ಆಲೌಟ್

ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ 70.5 ಓವರ್ 244 ರನ್ ಆಲೌಟ್
(ಡೇವಿಡ್ ವಾರ್ನರ್ 112, ಸ್ಟೀವನ್ ಸ್ಮಿತ್ 37, ಪ್ಯಾಟ್ ಕುಮಿನ್ಸ್ ಅಜೇಯ 33 ರನ್ - ಶಾಕಿಬ್ ಅಲ್ ಹಸನ್ 85/5, ತಜಿವುಲ್ ಇಸ್ಲಾಮ್ 60/3, ಮೆಹಿದಿ ಹಸನ್ ಮಿರಾಜ್ 80/2)

Follow Us:
Download App:
  • android
  • ios