ಶಕೀಬ್ ದಾಳಿಯಿಂದ  ಆಸೀಸ್ ವಿರುದ್ಧ ಮುನ್ನಡೆ ಸಾಧಿಸಿದ ಬಾಂಗ್ಲಾ

ಢಾಕಾ(.28): ಶಕೀಬ್ ಅಲ್ ಹಸನ್(68/5) ಅವರ ಉತ್ತಮ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 43 ರನ್'ಗಳ ಮುನ್ನಡೆ ಸಾಧಿಸಿದೆ. ಮೊದಲ ದಿನದಂತ್ಯಕ್ಕೆ 18 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದ ಆಸೀಸ್ 217 ರನ್‌ಗಳಿಗೆ ಆಲ್'ಔಟ್ ಆಯಿತು. ನಂತರ 2ನೇ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿ 88 ರನ್ ಮುನ್ನಡೆ ಸಾಧಿಸಿದೆ.

ಸ್ಕೋರ್

ಬಾಂಗ್ಲಾ 260/10 ಹಾಗೂ 45/1 (ತಮೀಮ್ 30),

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 217/10: (ರೆನ್‌ಶಾ 45, ಶಕೀಬ್ 68ಕ್ಕೆ 5)