ಬಾಂಗ್ಲಾ ಪರ ಮೆಹದಿ ಹಸನ್, ಮುಸ್ತಾಫಿಜುರ್ ತಲಾ 3 ವಿಕೆಟ್ ಪಡೆದರು.
ಚಿತ್ತಗಾಂಗ್(ಸೆ.06): ಆರಂಭಿಕ ಡೇವಿಡ್ ವಾರ್ನರ್ ಶತಕ ಮತ್ತು ಪೀಟರ್ ಹ್ಯಾಂಡ್ಸ್'ಕಂಬ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡ, ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿದೆ. ಆದರೆ ವಾರ್ನರ್ ಔಟ್ ಆಗುತ್ತಿದ್ದಂತೆ ದಿಢೀರ್ ಕುಸಿತ ಕಂಡಿದೆ.
ಬುಧವಾರ ಎರಡು ವಿಕೆಟ್'ಗೆ 225 ರನ್‌ಗಳಿಂದ ಮೊದಲ ಇನ್ನಿಂಗ್ಸ್ ಮುಂದುವರೆಸಿದ ಪ್ರವಾಸಿ ಆಸ್ಟ್ರೇಲಿಯಾ ತಂಡ ದಿನಾಂತ್ಯಕ್ಕೆ 9 ವಿಕೆಟ್'ಗೆ 377 ರನ್'ಗಳಿಸಿದೆ. ಈ ಮೂಲಕ 72 ರನ್'ಗಳ ಮುನ್ನಡೆ ಪಡೆದಿದೆ.
ನಿಧಾನಗತಿಯ ಬ್ಯಾಟಿಂಗ್ ನಡೆಸಿದ ವಾರ್ನರ್ 234 ಎಸೆತಗಳಲ್ಲಿ 7 ಬೌಂಡರಿ ಸಹಿತ 123 ರನ್'ಗಳಿಸಿದರು. ಹ್ಯಾಂಡ್ಸ್'ಕಂಬ್ 144 ಎಸೆತಗಳಲ್ಲಿ 82 ರನ್'ಗಳಿಸಿದರು. ಮ್ಯಾಕ್ಸ್‌ವೆಲ್ 38, ಕಾರ್ಟ್‌ರೈಟ್ 18, ಅಗರ್ 22 ರನ್'ಗಳಿಸಿದರು.
ಬಾಂಗ್ಲಾ ಪರ ಮೆಹದಿ ಹಸನ್, ಮುಸ್ತಾಫಿಜುರ್ ತಲಾ ೩ ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ 305
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 377/9 (೩ನೇ ದಿನಾಂತ್ಯಕ್ಕೆ)
(ವಾರ್ನರ್ 123, ಹ್ಯಾಂಡ್ಸ್'ಕಂಬ್ 82, ಮುಸ್ತಾಫಿಜುರ್ 84/3)
