ಫೈನಲ್ ಪ್ರವೇಶಿಸಿದ ಸಾತ್ವಿಕ್‌ಸಾಯಿರಾಜ್-ಚಿರಾಗ್ ಶೆಟ್ಟಿ ಜೋಡಿಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವ ವಿಶ್ವಾಸದಲ್ಲಿ ಭಾರತದ ಜೋಡಿಫೈನಲ್‌ನಲ್ಲಿ ಮಲೇಷ್ಯಾದ ಒಂಗ್ ಸಿನ್ ಹಾಗೂ ಟಿಯೊ ಯೀ ಜೋಡಿ
ದುಬೈ(ಏ.30): ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಜೋಡಿ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪುರುಷರ ಡಬಲ್ಸ್ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಜೋಡಿ ಎನ್ನುವ ದಾಖಲೆ ಬರೆದಿದೆ. ಶನಿವಾರ ನಡೆದ ಸೆಮಿಫೈನಲ್ ಪಂದ್ಯದ ನಡುವೆ ತಮ್ಮ ಎದುರಾಳಿಗಳು ಗಾಯಗೊಂಡು ನಿವೃತ್ತಿ ಪಡೆದ ಕಾರಣ, ಭಾರತೀಯ ಜೋಡಿ ಫೈನಲ್ ಪ್ರವೇಶಿಸಿತು.
ಚೈನೀಸ್ ತೈಪೆಯ ಲೀ ಯಾಂಗ್ ಹಾಗೂ ವಾಂಗ್ ಚೀ-ಲಿನ್ ವಿರುದ್ಧದ ಪಂದ್ಯದ ಮೊದಲ ಗೇಮ್‌ನಲ್ಲಿ 21-18ರ ಗೆಲುವು ಸಾಧಿಸಿದ್ದ ಸಾತ್ವಿಕ್-ಚಿರಾಗ್, 2ನೇ ಗೇಮ್‌ನಲ್ಲಿ 13-14ರಿಂದ ಹಿಂದಿದ್ದರು. ಈ ವೇಳೆ ತೈಪೆ ಜೋಡಿ ಪಂದ್ಯದಿಂದ ಹಿಂದೆ ಸರಿಯಿತು. ಭಾರತೀಯ ಜೋಡಿಗೆ ಫೈನಲ್‌ನಲ್ಲಿ ಮಲೇಷ್ಯಾದ ಒಂಗ್ ಸಿನ್ ಹಾಗೂ ಟಿಯೊ ಯೀ ಎದುರಾಗಲಿದ್ದಾರೆ.
ಇನ್ನು ಸಿಂಗಲ್ಸ್‌ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ. ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್.ಪ್ರಣಯ್ ಜಪಾನ್ನ ಕಂಟಾ ತ್ಸುನೆಯಮಾ ವಿರುದ್ಧ ಗಾಯಗೊಂಡು ಟೂರ್ನಿಯಿಂದ ಹೊರನಡೆದರೆ, ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಕೊರಿಯಾದ ಆನ್ ಸೆ ಯಂಗ್ ವಿರುದ್ಧ 21-18, 5-21, 9-21 ಗೇಮ್ಗಳಲ್ಲಿ ಪರಾಭವಗೊಂಡರು. ಮಿಶ್ರ ಡಬಲ್ಸ್ ಕ್ವಾರ್ಟರ್ನಲ್ಲಿ ರೋಹನ್ ಕಪೂರ್-ಸಿಕ್ಕಿ ರೆಡ್ಡಿ ಜೋಡಿಯೂ ಸೋತು ಹೊರ ಬಿದ್ದಿದೆ.
2025ರಿಂದ ಟೆನಿಸ್‌ನಲ್ಲಿ ಲೈನ್ ಅಂಪೈರ್‌ಗಳಿಲ್ಲ!
ಲಂಡನ್: 2025ರಿಂದ ಟೆನಿಸ್ ಪಂದ್ಯಗಳಲ್ಲಿ ಲೈನ್ ಅಂಪೈರ್‌ಗಳ ಬದಲು ಎಲೆಕ್ಟ್ರಾನಿಕ್ ಲೈನ್ ಕಾಲಿಂಗ್(ಇಎಲ್‌ಸಿ) ವ್ಯವಸ್ಥೆ ಬಳಕೆ ಮಾಡುವುದಾಗಿ ಜಾಗತಿಕ ಮಟ್ಟದಲ್ಲಿ ಪುರುಷರ ಟೆನಿಸ್ ಆಡಳಿತವನ್ನು ನಿರ್ವಹಿಸುವ ಎಟಿಪಿ ಶುಕ್ರವಾರ ತಿಳಿಸಿದೆ. ಇಎಲ್‌ಸಿ ಬಳಕೆಯಿಂದ ಚೆಂಡು ಅಂಕಣದ ಯಾವ ಭಾಗದಲ್ಲಿ ಬಿದ್ದಿದೆ ಎನ್ನುವುದನ್ನು ಇನ್ನಷ್ಟುನಿಖರವಾಗಿ ತಿಳಿಯಬಹುದಾಗಿದೆ. ಟೆನಿಸ್ ಆಟದ ಹಿತದೃಷ್ಟಿಯಿಂದ ಈ ವ್ಯವಸ್ಥೆ ಜಾರಿಗೆ ತರುವ ಅಗತ್ಯವಿದೆ ಎಂದು ಎಟಿಪಿ ಮುಖ್ಯಸ್ಥ ಆ್ಯಂಡ್ರೆಯಾ ಗೌಡೆನ್ಜಿ ಹೇಳಿದ್ದಾರೆ.
ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಪ್ರಿಯಾಂಕ ಗಾಂಧಿ, ಅರವಿಂದ್ ಕೇಜ್ರಿವಾಲ್
ಟೆಸ್ಟ್ ವಿಶ್ವಕಪ್ ಫೈನಲ್‌ಗೆ ವೇಗಿ ಉಮೇಶ್ ಯಾದವ್ ಅಲಭ್ಯ?
ಕೋಲ್ಕತಾ: ಸ್ನಾಯು ಸೆಳೆತಕ್ಕೆ ತುತ್ತಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಐಪಿಎಲ್ ಪಂದ್ಯವನ್ನು ತಪ್ಪಿಸಿಕೊಂಡ ವೇಗಿ ಉಮೇಶ್ ಯಾದವ್, ಆಸ್ಪ್ರೇಲಿಯಾ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹೊರಬೀಳುವ ಸಾಧ್ಯತೆ ಇದೆ. ಉಮೇಶ್ ಯಾದವ್ ಅವರ ಸ್ಕ್ಯಾನ್ನ್ ವರದಿ ಬರಬೇಕಿದ್ದು, ಗಾಯದ ಪ್ರಮಾಣ ನೋಡಿಕೊಂಡು ಬಿಸಿಸಿಐ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಟೆಸ್ಟ್ ವಿಶ್ವಕಪ್ ಫೈನಲ್ ಪಂದ್ಯವು ಜೂನ್ 7ರಿಂದ ಲಂಡನ್‌ನ ದಿ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರಶಸ್ತಿಗಾಗಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಡಲಿವೆ. ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಶಿಪ್‌ನಲ್ಲೂ ಭಾರತ ಕ್ರಿಕೆಟ್ ತಂಡವು ಫೈನಲ್ ಪ್ರವೇಶಿಸಿತ್ತಾದರೂ, ಫೈನಲ್‌ನಲ್ಲಿ ಮುಗ್ಗರಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಭಾರತ ತಂಡ ಹೀಗಿದೆ ನೋಡಿ:
ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ ಎಲ್ ರಾಹುಲ್, ಕೆ ಎಸ್ ಭರತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್.
