ಇದೀಗ, ಜಾಹೀರಾತೊಂದಕ್ಕೆ ಬಾಬಾ ಅವತಾರದಲ್ಲಿ ಕಾಣಿಸಿಕೊಂಡಿರುವ ಸೆಹ್ವಾಗ್, ನನ್ನ ಆಶಿರ್ವಾದ ಯಾವಾಗಲೂ ಟೀಂ ಇಂಡಿಯಾ ಜತೆ ಇರಲಿದೆ ಎಂದು ಇನ್’ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ನವದೆಹಲಿ(ಆ.04]: ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ವೀರೇಂದ್ರ ಸೆಹ್ವಾಗ್ ದಿನಕ್ಕೊಂದು ಸುದ್ದಿ ಮಾಡುತ್ತಿರುತ್ತಾರೆ.
ಇದೀಗ, ಜಾಹೀರಾತೊಂದಕ್ಕೆ ಬಾಬಾ ಅವತಾರದಲ್ಲಿ ಕಾಣಿಸಿಕೊಂಡಿರುವ ಸೆಹ್ವಾಗ್, ನನ್ನ ಆಶಿರ್ವಾದ ಯಾವಾಗಲೂ ಟೀಂ ಇಂಡಿಯಾ ಜತೆ ಇರಲಿದೆ ಎಂದು ಇನ್’ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಆಡುತ್ತಿದ್ದು, ಮೂರನೇ ದಿನದಾಟ ಮುಕ್ತಾಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು 110 ರನ್ ಬಾರಿಸಿದ್ದು, ಗೆಲ್ಲಲು ಇನ್ನೂ 84 ರನ್’ಗಳ ಅವಶ್ಯಕತೆಯಿದೆ.
‘ಗುರುವನ್ನು ಆಯ್ಕೆ ಮಾಡುವಾಗ ಸರಿಯಾದವರನ್ನು ಆಯ್ಕೆ ಮಾಡಿ’ ಎಂದು ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ. ಸೆಹ್ವಾಗ್‌ರ ಈ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.