ಅಜ್ಲಾನ್‌ ಶಾ ಹಾಕಿ: ಇಂದು ಭಾರತಕ್ಕೆ ಮಲೇಷ್ಯಾ ಸವಾಲು

ಅಜ್ಲಾನ್‌ ಶಾ ಹಾಕಿ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಭಾರತ ಇದೀಗ ಕಠಿಣ ಸವಾಲು ಎದುರಾಗಿದೆ. ಬಲಿಷ್ಠ ಮಲೇಷ್ಯಾ ವಿರುದ್ಧ ಹೋರಾಟಕ್ಕಿಳಿದಿರುವ ಭಾರತ ಇದೀಗ ಒತ್ತಡಕ್ಕೆ ಸಿಲುಕಿದೆ.

Azlan shah cup hockey India will face tough challenge against Malaysia

ಇಫೋ(ಮಲೇಷ್ಯಾ)(ಮಾ.26): ಸುಲ್ತಾನ್‌ ಅಜ್ಲಾನ್‌ ಶಾ ಹಾಕಿ ಟೂರ್ನಿಯ ಆರಂಭಿಕ ಹಂತದಲ್ಲೇ ಭಾರತ ಒತ್ತಡಕ್ಕೆ ಸಿಲುಕಿದೆ. ಮೊದಲ ಪಂದ್ಯದಲ್ಲಿ ಜಪಾನ್‌ ವಿರುದ್ಧ 2-0 ಗೋಲುಗಳಿಂದ ಗೆದ್ದಿದ್ದ ಭಾರತ, 2ನೇ ಪಂದ್ಯದಲ್ಲಿ ಕೊರಿಯಾಕ್ಕೆ ಕೊನೆ ನಿಮಿಷದಲ್ಲಿ ಗೋಲು ಬಿಟ್ಟುಕೊಟ್ಟು 1-1ರ ಡ್ರಾಗೆ ತೃಪ್ತಿಪಟ್ಟಿತ್ತು.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಂತಾರಾಷ್ಟ್ರೀಯ ಹಾಕಿ ಪಟು ನಿತಿನ್ ತಿಮ್ಮಯ್ಯ!

4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಭಾರತ, ಮಂಗಳವಾರ ನಡೆಯಲಿರುವ 3ನೇ ಪಂದ್ಯದಲ್ಲಿ ಆತಿಥೇಯ ಮಲೇಷ್ಯಾ ವಿರುದ್ಧ ಸೆಣಸಲಿದೆ. ಫೈನಲ್‌ಗೇರಬೇಕಿದ್ದರೆ ತಂಡ ಮುಂದಿನ ಮೂರೂ ಪಂದ್ಯಗಳನ್ನು ಗೆಲ್ಲಲೇಬೇಕಿದೆ. 

ಕೊನೆ 2 ಪಂದ್ಯಗಳಲ್ಲಿ ಎದುರಾಗಲಿರುವ ಕೆನಡಾ ಹಾಗೂ ಪೋಲೆಂಡ್‌, ಸುಲಭ ಎದುರಾಳಿಗಳೆನಿಸಿದರೂ ಮಲೇಷ್ಯಾ ತಂಡ ಇತ್ತೀಚಿನ ವರ್ಷಗಳಲ್ಲಿ ಭಾರತಕ್ಕೆ ಹಲವು ಬಾರಿ ಆಘಾತ ನೀಡಿದೆ. ಹೀಗಾಗಿ ಈ ಪಂದ್ಯ ಮನ್‌ಪ್ರೀತ್‌ ಸಿಂಗ್‌ ಪಡೆಯನ್ನು ಒತ್ತಡಕ್ಕೆ ಸಿಲುಕಿಸಿದೆ.

Latest Videos
Follow Us:
Download App:
  • android
  • ios