ಲಂಡನ್: ವಿಶ್ವದ ಮಾಜಿ ನಂ.1 ಟೆನಿಸ್ ಆಟಗಾರ್ತಿ ಬೇಲಾರಸ್‌'ನ ವಿಕ್ಟೋರಿಯಾ ಅಜರೆಂಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಅಜರೆಂಕಾ ಅವರಿಗೆ ಇದು ಮೊದಲ ಮಗುವಾಗಿದೆ ಎಂದು ಆಕೆಯ ಪತಿ ಬಿಲ್ಲೆ ಮೆಕ್‌'ಕೆಜ್ಯೂ ಹೇಳಿದ್ದಾ.

ಎರಡು ಬಾರಿ ಆಸ್ಟ್ರೇಲಿಯನ್ ಚಾಂಪಿಯನ್ ಎನಿಸಿರುವ ಅಜರೆಂಕಾ ಮಗುವಿನೊಂದಿಗಿರುವ ಭಾವಚಿತ್ರವನ್ನು ಸಾಮಾಜಿಕ ಜಾಲತಾಣವಾದ ಟ್ವೀಟರ್‌'ಗೆ ಅಪ್‌ಲೋಡ್ ಮಾಡಿದ್ದಾರೆ.

‘‘ಇಂದು ನಾನು ಅತ್ಯಂತ ಕಠಿಣ ಯುದ್ಧವನ್ನು ಗೆದ್ದಿದ್ದೇನೆ. ನನಗೆ ಗಂಡು ಮಗು ಹುಟ್ಟಿದೆ. ಹೆಚ್ಚು ಸಂತಸವಾಗಿದೆ’’ ಎಂದು ಅಜರೆಂಕಾ ಟ್ವೀಟ್ ಮಾಡಿದ್ದಾರೆ.

 

ವಿಶ್ವದ ಇತರೆ ಟೆನಿಸ್ ಆಟಗಾರರು ಕೂಡ ಅಜರೆಂಕಾಗೆ ಶುಭಾಶಯ ಕೋರಿದ್ದಾರೆ.