ಇನ್ನೂ 15 ವಿಕೆಟ್ ಪಡೆದು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಅಮಿತ್ ಮಿಶ್ರಾ 25ಸ್ಥಾನ ಜಿಗಿದು 12ನೇ ಸ್ಥಾನ ಪಡೆದಿದ್ದಾರೆ.
ದೆಹಲಿ(ಅ.30): ನ್ಯೂಜಿಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಐಸಿಸಿ ರ್ಯಾಂಕಿಂಗ್ನ ಬೌಲಿಂಗ್ನಲ್ಲಿ 9ನೇ ಸ್ಥಾನ ಪಡೆಯುವ ಮೂಲಕ ಟಾಪ್ 10 ಬೌಲರ್ಸ್ ನಲ್ಲಿ ಭಾರತದ ಎಕೈಕ ಬೌಲರ್ ಎನ್ನಿಸಿಕೊಂಡಿದ್ದಾರೆ. ಇನ್ನೂ 15 ವಿಕೆಟ್ ಪಡೆದು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಅಮಿತ್ ಮಿಶ್ರಾ 25ಸ್ಥಾನ ಜಿಗಿದು 12ನೇ ಸ್ಥಾನ ಪಡೆದಿದ್ದಾರೆ. ಇನ್ನೂ ಉತ್ತಮ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದು, 7ನೇ ಸ್ಥಾನದಲ್ಲಿದ್ದ ರೊಹಿತ್ ಶರ್ಮಾ 9ನೇ ಸ್ಥಾನಕ್ಕೆ ಕುಸಿದಿದ್ದಾರೆ.
