ಕೊನೆಯಲ್ಲಿ ಆಗಮಿಸಿದ ಮಧ್ಯಮ ಕ್ರಮಾಂಕದ ಆಟಗಾರ 30 ಚಂಡುಗಳಲ್ಲಿ 1 ಸಿಕ್ಸ್'ರ್, 3 ಬೌಂಡರಿಗಳೊಂದಿಗೆ 43 ರನ್ ಗಳಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ 50 ಓವರ್'ಗಳಲ್ಲಿ 5 ವಿಕೇಟ್ ನಷ್ಟಕ್ಕೆ 334 ಬೃಹತ್ ಮೊತ್ತ ಕಲೆ ಹಾಕಿತು. ಭಾರತದ ಪರ ಉಮೇಶ್ ಯಾದವ್ 71/4 ವಿಕೇಟ್ ಕಬಳಿಸಿದರು.

ಬೆಂಗಳೂರು(ಸೆ.28): ಸಿಲಿಕಾನ್ ಸಿಟಿ ಪ್ರೇಕ್ಷಕರಿಗೆ ಎರಡೂ ತಂಡದ ಆಟಗಾರರು ರನ್'ಗಳ ಹೊಳೆ ಹರಿಸಿ ಉತ್ತಮ ಮನರಂಜನೆ ನೀಡಿದರು. ಆದರೆ ಅಂತಿಮವಾಗಿ ವಿಜಯಲಕ್ಷ್ಮಿ ಒಲಿದಿದ್ದು ಆಸ್ಟ್ರೇಲಿಯಾ ತಂಡಕ್ಕೆ. 334 ರನ್'ಗಳ ಬೃಹತ್ ಸವಾಲನ್ನು ಬೆನ್ನಟ್ಟಿದ ಟೀಂ ಇಂಡಿಯಾ 313 ರನ್ ಮಾತ್ರ ಗಳಿಸಲಾಗಿ 21 ರನ್'ಗಳಿಂದ ಸೋಲನ್ನೊಪ್ಪಿಕೊಂಡಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಶುರು ಮಾಡಿದ ಆಸೀಸ್ ತಂಡಕ್ಕೆ ಆರಂಭಿಕ ಆಟಗಾರರು ಸ್ಫೋಟಕ ಆಟವಾಡಿ ಭದ್ರಬುನಾದಿ ಹಾಕಿದರು.

ಮೊದಲ ವಿಕೇಟ್ ನಷ್ಟಕ್ಕೆ ವಾರ್ನರ್ ಹಾಗೂ ಫಿಂಚ್ ಜೋಡಿ 35 ಓವರ್'ಗಳಲ್ಲಿ 231 ರನ್ ಕಲೆ ಹಾಕಿದರು. ವಾರ್ನ್'ರ್ 119 ಎಸೆತಗಳಲ್ಲಿ 4 ಸಿಕ್ಸ್'ರ್, 12 ಬೌಂಡರಿಗಳೊಂದಿಗೆ 124 ರನ್ ಚಚ್ಚಿದರೆ ಫಿಂಚ್ 96 ಎಸೆತಗಳಲ್ಲಿ 3 ಸಿಕ್ಸ್'ರ್ 10 ಬೌಂಡರಿಯೊಂದಿಗೆ 94 ರನ್ ಸಿಡಿಸಿದರು. ಕೊನೆಯಲ್ಲಿ ಆಗಮಿಸಿದ ಮಧ್ಯಮ ಕ್ರಮಾಂಕದ ಆಟಗಾರ 30 ಚಂಡುಗಳಲ್ಲಿ 1 ಸಿಕ್ಸ್'ರ್, 3 ಬೌಂಡರಿಗಳೊಂದಿಗೆ 43 ರನ್ ಗಳಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ 50 ಓವರ್'ಗಳಲ್ಲಿ 5 ವಿಕೇಟ್ ನಷ್ಟಕ್ಕೆ 334 ಬೃಹತ್ ಮೊತ್ತ ಕಲೆ ಹಾಕಿತು. ಭಾರತದ ಪರ ಉಮೇಶ್ ಯಾದವ್ 71/4 ವಿಕೇಟ್ ಕಬಳಿಸಿದರು.

ಮತ್ತೆ ಮಿಂಚಿದ ಶರ್ಮಾ, ಪಾಂಡ್ಯ, ಜಾಧವ್

335 ರನ್'ಗಳ ಬೃಹತ್ ಮೊತ್ತ ಬೆನ್ನಟ್ಟಿದ ಭಾರತ ತಂಡಕ್ಕೆ ಎಲ್ಲ ಬ್ಯಾಟ್ಸ್'ಮೆನ್'ಗಳು ಉತ್ತಮವಾಗಿ ಆಟವಾಡಿದರು. ರೋಹಿತ್ ಶರ್ಮಾ(65) ಹಾಗೂ ಹಾರ್ದಿಕ್ ಪಾಂಡ್ಯ(41) ತಮ್ಮ ಅದ್ಭುತ ಸಿಕ್ಸ್'ರ್'ಗಳ ಮೂಲಕ ಪ್ರೇಕ್ಷಕರಿಗೆ ಉತ್ತಮ ಮನರಂಜನೆ ನೀಡಿದರು.

ಜಾಧವ್(67) ಹಾಗೂ ರಹಾನೆ(53) ಕೂಡ ತಾವೇನು ಕಡಿಮೆಯಿಲ್ಲ ಎಂದು ಉತ್ತಮವಾಗಿ ಆಟವಾಡಿದರು. ಕನ್ನಡಿಗ ಮನೀಶ್ ಪಾಂಡೆ 25 ಎಸತಗಳಲ್ಲಿ 3 ಬೌಂಡರಿ 1 ಸಿಕ್ಸ್'ರ್'ನೊಂದಿಗೆ 33 ರನ್ ಗಳಿಸಿದರು. ಆದರೆ ಕೊನೆಯ ಓವರ್'ಗಳಲ್ಲಿ ಬ್ಯಾಟ್ಸ್'ಮೆನ್'ಗಳು ವಿಕೇಟ್ ಕಳೆದುಕೊಂಡ ಕಾರಣ ಟೀಂ ಇಂಡಿಯಾಕ್ಕೆ ಗೆಲುವು ಮರೀಚಿಕೆಯಾಯಿತು. 50 ಓವರ್'ಗಳಲ್ಲಿ 8 ವಿಕೇಟ್ ನಷ್ಟಕ್ಕೆ 313 ರನ್ ಗಳಿಸಲಷ್ಟೆ ಸಾಧ್ಯವಾಯಿತು. ಆಸೀಸ್ ಪರ ರಿಚರ್ಡ್'ಸನ್ 58/3 ಹಾಗೂ ಕೌಲ್ಟರ್ ನೀಲ್ 56/2 ವಿಕೇಟ್ ಕಿತ್ತು ಯಶಸ್ವಿ ಬೌಲರ್ ಎನಿಸಿದರು. ಶತಕ ಭಾರಿಸಿದ ಡೇವಿಡ್ ವಾರ್ನ'ರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪುರಸ್ಕೃತರಾದರು.

ಸ್ಕೋರ್

ಆಸ್ಟ್ರೇಲಿಯಾ 50 ಓವರ್'ಗಳಲ್ಲಿ 335/5

(ಡೇವಿಡ್ ವಾರ್ನ್'ರ್ 124, ಅರೋನ್ ಫಿಂಚ್ 94, ಉಮೇಶ್ ಯಾದವ್ 71/4)

ಭಾರತ 50 ಓವರ್'ಗಳಲ್ಲಿ 313/8

(ರಹಾನೆ 53, ರ್. ಶರ್ಮಾ 65, ಜಾಧವ್ 67, ಪಾಂಡ್ಯ 41, ರಿಚರ್ಡ್'ಸನ್ 58/3. ಕೆ. ನೀಲ್ 56/2)