ತಾನು ಪ್ರಸ್ತಾಪಿಸಿರುವ ನೂತನ ಒಪ್ಪಂದಕ್ಕೆ ಸಹಿ ಹಾಕದಿದ್ದರೆ, ಜೂನ್‌ 30ರ ನಂತರ ವೇತನ ನೀಡುವುದಿಲ್ಲ ಎಂದು ಕ್ರಿಕೆಟ್‌ ಆಸ್ಪ್ರೇಲಿಯಾ ತನ್ನ ಆಟಗಾರರಿಗೆ ಎಚ್ಚರಿಕೆ ನೀಡಿದೆ.

ಬೆಂಗಳೂರು(ಮೇ.14): ಆಸೀಸ್‌ ಆಟಗಾರರು ಐಪಿಎಲ್‌ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆಸ್ಪ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಐಪಿಎಲ್‌'ನಲ್ಲಿ ಪಾಲ್ಗೊಳ್ಳದಂತೆ ತನ್ನ ಆಟಗಾರರಿಗೆ ಕ್ರಿಕೆಟ್‌ ಆಸ್ಪ್ರೇಲಿಯಾ ಕೇಳಿಕೊಂಡಿರುವ ಕುರಿತು ಪ್ರತಿಕ್ರಿಯಿಸಿರುವ ಕ್ಲಾರ್ಕ್, ಸ್ಟೀವನ್‌ ಸ್ಮಿತ್‌, ಡೇವಿಡ್‌ ವಾರ್ನರ್‌ ತಪ್ಪದೇ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ‘‘ಆಸೀಸ್‌'ನ ಪ್ರತಿಯೊಬ್ಬ ಆಟಗಾರರು ಐಪಿಎಲ್‌ ಅನ್ನು ಪ್ರೀತಿಸುತ್ತಾರೆ. ಇಲ್ಲಿ ಆಡಲು ಇಷ್ಟಪಡುತ್ತಾರೆ. ಆಸೀಸ್‌ ಆಟಗಾರರು ಐಪಿಎಲ್‌'ನ ಭಾಗವಾಗಿ ಮುಂದುವರಿಯಲಿದ್ದಾರೆ'' ಎಂದಿದ್ದಾರೆ. 

ಒತ್ತಡದಲ್ಲಿ ಆಸೀಸ್‌ ಕ್ರಿಕೆಟಿಗರು: ತಾನು ಪ್ರಸ್ತಾಪಿಸಿರುವ ನೂತನ ಒಪ್ಪಂದಕ್ಕೆ ಸಹಿ ಹಾಕದಿದ್ದರೆ, ಜೂನ್‌ 30ರ ನಂತರ ವೇತನ ನೀಡುವುದಿಲ್ಲ ಎಂದು ಕ್ರಿಕೆಟ್‌ ಆಸ್ಪ್ರೇಲಿಯಾ ತನ್ನ ಆಟಗಾರರಿಗೆ ಎಚ್ಚರಿಕೆ ನೀಡಿದೆ. ಈ ಮೂಲಕ ಆಟಗಾರರು ಮತ್ತು ಮಂಡಳಿ ನಡುವಿನ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗಿದೆ.