ಆಸ್ಪ್ರೇಲಿಯನ್‌ ಓಪನ್‌: ಕ್ವಾರ್ಟರ್‌ಗೆ ಜೋಕೋ, ಸೆರೆನಾ

ಪುರುಷರ ಸಿಂಗಲ್ಸ್‌ನ 4ನೇ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.1 ಆಟಗಾರ ನೋವಾಕ್‌ ಜೋಕೋವಿಚ್‌, ಫ್ರಾನ್ಸ್‌ನ ಡ್ಯಾನಿಲ್‌ ಮೆಡ್ವೆಡೆವ್‌ ವಿರುದ್ಧ 6-4,6-7, 6-2, 6-3 ಸೆಟ್‌ಗಳಲ್ಲಿ ಜಯಗಳಿಸಿದರು.

Australian Open2019 Novak Djokovic and Serena Williams reach quarter finals

ಮೆಲ್ಬರ್ನ್‌(ಜ.22): ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌ ಗ್ರ್ಯಾಂಡ್‌ಸ್ಲಾಂನ ಕ್ವಾರ್ಟರ್‌ ಫೈನಲ್‌ಗೆ ನೋವಾಕ್‌ ಜೋಕೋವಿಚ್‌ ಹಾಗೂ ಸೆರೆನಾ ವಿಲಿಯಮ್ಸ್‌ ಪ್ರವೇಶಿಸಿದ್ದಾರೆ. 

ಪುರುಷರ ಸಿಂಗಲ್ಸ್‌ನ 4ನೇ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.1 ಆಟಗಾರ, ಫ್ರಾನ್ಸ್‌ನ ಡ್ಯಾನಿಲ್‌ ಮೆಡ್ವೆಡೆವ್‌ ವಿರುದ್ಧ 6-4,6-7, 6-2, 6-3 ಸೆಟ್‌ಗಳಲ್ಲಿ ಜಯಗಳಿಸಿದರು. ಕರ್ರೆನ್ಸೋ ಬುಸ್ಟಾ ವಿರುದ್ಧ ಗೆದ್ದ ಕೇ ನಿಶಿಕೋರಿ, ಬೋರ್ನಾ ಸಿಲಿಚ್‌ ವಿರುದ್ಧ ಗೆದ್ದ ಲೂಕಾಸ್‌ ಪೌಲಿ ಹಾಗೂ 4ನೇ ಶ್ರೇಯಾಂಕಿತ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ ಗೆದ್ದ 16ನೇ ಶ್ರೇಯಾಂಕಿತ ಕೆನಡಾದ ಮಿಲೋಸ್‌ ರವೋನಿಚ್‌ ಕ್ವಾರ್ಟರ್‌ಗೇರಿದ್ದಾರೆ. 

ಮಹಿಳಾ ಸಿಂಗಲ್ಸ್‌ನ 4ನೇ ಸುತ್ತಿನಲ್ಲಿ ವಿಶ್ವ ನಂ.1 ರೊಮೇನಿಯಾದ ಸಿಮೋನಾ ಹಾಲೆಪ್‌ ವಿರುದ್ಧ 6-1,4-6, 6-4 ಸೆಟ್‌ಗಳಲ್ಲಿ ಗೆದ್ದ ಸೆರೆನಾ ಅಂತಿಮ 8ರ ಘಟ್ಟಕ್ಕೇರಿದರು. ಮುಗುರುಜಾ ವಿರುದ್ಧ ಗೆದ್ದ ಪ್ಲಿಸ್ಕೋವಾ, ಸೆವಸ್ಟೋವಾ ವಿರುದ್ಧ ಗೆದ್ದ ಒಸಾಕ ಹಾಗೂ ಎಲಿನಾ ಸ್ವಿಟೋಲಿನಾ ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.

Latest Videos
Follow Us:
Download App:
  • android
  • ios