ಆಸ್ಪ್ರೇಲಿಯನ್ ಓಪನ್: ಪ್ರಧಾನ ಸುತ್ತಿಗೆ ಪ್ರಜ್ನೇಶ್
ಟೆನಿಸ್ ವೃತ್ತಿ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಪ್ರಜ್ನೇಶ್ ಗ್ರ್ಯಾಂಡ್‌ಸ್ಲಾಂನ ಪ್ರಧಾನ ಸುತ್ತಿಗೆ ಪ್ರವೇಶ ಪಡೆದ ಸಾಧನೆ ಮಾಡಿದ್ದಾರೆ.
ಮೆಲ್ಬರ್ನ್(ಜ.12): ಭಾರತದ ಅಗ್ರ ಟೆನಿಸ್ ಆಟಗಾರ ಪ್ರಜ್ನೇಶ್ ಗುಣೇಶ್ವರನ್, ಪ್ರತಿಷ್ಠಿತ ಆಸ್ಪ್ರೇಲಿಯನ್ ಓಪನ್ ಗ್ರ್ಯಾಂಡ್‌ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನ ಪ್ರಧಾನ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.
ಶುಕ್ರವಾರ ನಡೆದ 3ನೇ ಹಾಗೂ ಕೊನೆಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪ್ರಜ್ನೇಶ್, ಜಪಾನ್‌ನ ಯೊಸುಕೆ ವಾಟ್ನೌಕಿ ವಿರುದ್ಧ 6-7, 6-4, 6-4 ಸೆಟ್‌ಗಳಲ್ಲಿ ಜಯ ಪಡೆದರು. ಟೆನಿಸ್ ವೃತ್ತಿ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಪ್ರಜ್ನೇಶ್ ಗ್ರ್ಯಾಂಡ್‌ಸ್ಲಾಂನ ಪ್ರಧಾನ ಸುತ್ತಿಗೆ ಪ್ರವೇಶ ಪಡೆದ ಸಾಧನೆ ಮಾಡಿದ್ದಾರೆ.
ಕಳೆದ 5 ವರ್ಷದಲ್ಲಿ ಪ್ರಜ್ನೇಶ್ ಸೇರಿ ಭಾರತದ ಮೂವರು ಆಟಗಾರರು ಮಾತ್ರ ಗ್ರ್ಯಾಂಡ್‌ಸ್ಲಾಂ ಪುರುಷರ ಸಿಂಗಲ್ಸ್ ಪ್ರಧಾನ ಸುತ್ತಿನಲ್ಲಿ ಕಾಣಿಸಿಕೊಂಡಿದ್ದಾರೆ. 2018ರಲ್ಲಿ ಯೂಕಿ ಭಾಂಬ್ರಿ ಎಲ್ಲಾ 4 ಗ್ರ್ಯಾಂಡ್‌ಸ್ಲಾಂ ಪ್ರಧಾನ ಸುತ್ತುಗಳಲ್ಲಿ ಆಡಿದ್ದರು. 2013ರ ಯುಎಸ್ ಓಪನ್‌ನ ಪ್ರಧಾನ ಸುತ್ತಿನಲ್ಲಿ ಸೋಮ್‌ದೇವ್ ದೇವವರ್ಮನ್ ಕಣಕ್ಕಿಳಿದಿದ್ದರು.