ಇದೀಗ ರೋಹನ್ ಬೋಪಣ್ಣ ಆಸ್ಟ್ರೇಲಿಯಾ ಓಪನ್ ಕಣದಲ್ಲಿ ಉಳಿದಿರುವ ಏಕೈಕ ಭಾರತೀಯ ಆಟಗಾರನೆನಿಸಿದ್ದಾರೆ. ಈಗಾಗಲೇ ಹಿರಿಯ ಆಟಗಾರ ಲಿಯಾಂಡರ್ ಪೇಸ್,ಪೌರವ್ ರಾಜಾ, ದಿವಿಜ್ ಶರಣ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಮೆಲ್ಬರ್ನ್(ಜ.23): ವರ್ಷದ ಮೊದಲ ಗ್ರ್ಯಾಂಡ್'ಸ್ಲಾಂನ ಮಿಶ್ರ ಡಬಲ್ಸ್‌'ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಹಂಗೇರಿಯಾದ ಟಿಮಿಯಾ ಬಾಬೊಸ್ ಜೋಡಿ, ಎಂಟರಘಟ್ಟಕ್ಕೆ ಲಗ್ಗೆ ಇಟ್ಟಿದೆ.

5ನೇ ಶ್ರೇಯಾಂಕಿತ ಬೋಪಣ್ಣ ಮತ್ತು ಬಾಬೊಸ್ ಜೋಡಿ ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ಅಮೆರಿಕದ ವಾನಿಯಾ ಕಿಂಗ್ ಮತ್ತು ಕ್ರೋಯೇಶಿಯಾದ ಫ್ರಾಂಕೊ ಸ್ಕುಗರ್ ಜೋಡಿ ವಿರುದ್ಧ 6-4, 6-4 ನೇರ ಸೆಟ್‌'ಗಳಲ್ಲಿ ಜಯ ಸಾಧಿಸುವ ಮೂಲಕ ಕ್ವಾರ್ಟರ್'ಫೈನಲ್ ಪ್ರವೇಶಿಸಿತು.

ಇನ್ನು ಬುಧವಾರ ನಡೆಯಲಿರುವ ಕ್ವಾರ್ಟರ್‌'ಫೈನಲ್‌'ನಲ್ಲಿ ಬೋಪಣ್ಣ ಮತ್ತು ಬಾಬೊಸ್ ಜೋಡಿ ಅಮೆರಿಕದ ಅಬಿಗಿಲ್ ಸ್ಪೇರ್ಸ್‌ ಹಾಗೂ ಕೊಲಂಬಿಯಾದ ಜುವಾನ್ ಸೆಬಾಸ್ಟಿಯನ್ ಜೋಡಿ ಎದುರು ಸೆಣಸಲಿದೆ.

ಇದೀಗ ರೋಹನ್ ಬೋಪಣ್ಣ ಆಸ್ಟ್ರೇಲಿಯಾ ಓಪನ್ ಕಣದಲ್ಲಿ ಉಳಿದಿರುವ ಏಕೈಕ ಭಾರತೀಯ ಆಟಗಾರನೆನಿಸಿದ್ದಾರೆ. ಈಗಾಗಲೇ ಹಿರಿಯ ಆಟಗಾರ ಲಿಯಾಂಡರ್ ಪೇಸ್,ಪೌರವ್ ರಾಜಾ, ದಿವಿಜ್ ಶರಣ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.