ಆಸ್ಟ್ರೇಲಿಯನ್ ಓಪನ್‌ನಲ್ಲಿ ಸಿನ್ನರ್ ಮತ್ತು ಸ್ವಿಯಾಟೆಕ್ ಸೆಮಿಫೈನಲ್ ತಲುಪಿದ್ದಾರೆ. ಸಿನ್ನರ್, ಡಿ ಮಿನೌರ್‌ರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿದರೆ, ಸ್ವಿಯಾಟೆಕ್ ನವಾರ್ರೋರನ್ನು ಮಣಿಸಿದರು. ಸಿನ್ನರ್, ಶೆಲ್ಟನ್‌ರನ್ನು ಎದುರಿಸಲಿದ್ದಾರೆ. ಸ್ವಿಯಾಟೆಕ್, ಕೀಸ್‌ರೊಂದಿಗೆ ಸೆಣಸಲಿದ್ದಾರೆ. ಜೋಕೋವಿಚ್-ಜೆರೆವ್, ಸಬಲೆಂಕಾ-ಬಡೋಸಾ ಇತರೆ ಸೆಮಿಫೈನಲ್‌ ಪಂದ್ಯಗಳು.

ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಗ್ಯಾನ್ ಸ್ಲಾಂನಲ್ಲಿ ಪುರುಷರ ಸಿಂಗಲ್ಸ್ ವಿಶ್ವ ನಂ.1 ಯಾನ್ನಿಕ್ ಸಿನ್ನರ್ ಹಾಗೂ ಮಹಿಳಾ ಸಿಂಗಲ್ ವಿಶ್ವ ನಂ.2 ಇಗಾ ಸ್ವಿಯಾಟೆಕ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಟೂರ್ನಿಯಲ್ಲಿ ತಮ್ಮ ಅಮೋಘ ಆಟ ಪ್ರದರ್ಶಿಸಿರುವ ಈ ಇಬ್ಬರು, ಮತ್ತೊಂದು ಸುಲಭ ಗೆಲುವು ದಾಖಲಿಸಿದ್ದಾರೆ.

ಬುಧವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಸಿನ್ನರ್, 8ನೇ ಶ್ರೇಯಾಂಕಿತ ಆಸ್ಟ್ರೇಲಿಯಾದ ಅಲೆಕ್ಸ್‌ ಡಿ ಮಿನೌರ್ ವಿರುದ್ಧ 6-3, 6-2, 6-1 ನೇರ ಸೆಟ್‌ಗಳಲ್ಲಿ ಜಯಿಸಿದರು. ಮತ್ತೊಂದು ಕ್ವಾರ್ಟರಲ್ಲಿ ಇಟಲಿಯ ಶ್ರೇಯಾಂಕ ರಹಿತ ಆಟಗಾರ ಲೊರೆನ್ಸ್ ಸೊನೆಗೆ ವಿರುದ್ಧ 21ನೇ ಶ್ರೇಯಾಂಕಿತ, ಅಮೆರಿಕದ ಬೆನ್ ಶೆಲ್ಟನ್‌ಗೆ 6-4, 7-5, 4-6, 7-6(7/4) ಸೆಟ್‌ಗಳಲ್ಲಿ ಜಯ ದೊರೆಯಿತು. ಸೆಮೀಸ್‌ನಲ್ಲಿ ಸಿನ್ನರ್ ಹಾಗೂ ಶೆಲ್ಡನ್ ಮುಖಾಮುಖಿಯಾಗಲಿದ್ದಾರೆ. ಮತ್ತೊಂದು ಸೆಮೀಸ್‌ನಲ್ಲಿ ಜೋಕೋವಿಚ್ ಹಾಗೂ ಜೆರೆವ್ ಸೆಣಸಲಿದ್ದಾರೆ.

ಇನ್ನು, ಮಹಿಳಾ ಸಿಂಗಲ್ಸ್‌ ಕ್ವಾರ್ಟರ್ ಫೈನಲ್‌ನಲ್ಲಿ ಪೋಲೆಂಡ್‌ ಸ್ವಿಯಾಟೆಕ್‌ಗೆ 8ನೇ ಶ್ರೇಯಾಂಕಿತೆ ಅಮೆರಿಕದ ಎಮ್ಮಾ ನವಾರ್ರೋ ವಿರುದ್ಧ 6-1, 6-2 ಸೆಟ್‌ಗಳಲ್ಲಿ ಗೆಲುವು ಒಲಿಯಿತು. ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿಉಕ್ರೇನ್‌ನ ಎಲೆನಾ ಟೋಲಿನಾ ವಿರುದ್ಧ ಅಮೆರಿಕದ ಮ್ಯಾಡಿಸನ್ ಕೀಸ್ 3-6, 6-3, 6-4ರಲ್ಲಿ ಜಯಿಸಿ ಉಪಾಂತ್ಯಕ್ಕೆ ಕಾಲಿಟ್ಟರು. ಸೆಮೀಸ್‌ನಲ್ಲಿ ಸ್ವಿಯಾಟೆಕ್ ಹಾಗೂ ಕೀಸ್ ಪರಸ್ಪರ ಎದುರಾಗಲಿದ್ದು, ಮತ್ತೊಂದು ಸೆಮೀಸ್‌ನಲ್ಲಿ ಅಗ್ರಶ್ರೇಯಾಂಕಿತೆ ಸಬಲೆಂಕಾ ಹಾಗೂ ಬಡೋಸಾ ಸೆಣಸಲಿದ್ದಾರೆ.

ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್; 13 ವರ್ಷಗಳ ಬಳಿಕ ರಣಜಿ ಟ್ರೋಫಿ ಆಡಲು ಕಿಂಗ್ ಕೊಹ್ಲಿ ರೆಡಿ!

ಬೆಂಗಳೂರು ಟೆನಿಸ್‌: 2ನೇ ಸುತ್ತಿಗೆ ಅಂಕಿತಾ

ಬೆಂಗಳೂರು: ಬುಧವಾರದಿಂದ ಇಲ್ಲಿ ಆರಂಭಗೊಂಡ ಮಹಿಳಾ ಅಂ.ರಾ. ಟೆನಿಸ್‌ ಟೂರ್ನಿಯಲ್ಲಿ ಭಾರತದ ಅಂಕಿತಾ ರೈನಾ, ಸಹಜ ಯಮಲಪಳ್ಳಿ 2ನೇ ಸುತ್ತಿಗೇರಿದ್ದಾರೆ. ಮೊದಲ ಸುತ್ತಿನಲ್ಲಿ ಅಂಕಿತಾ ರಷ್ಯಾದ ದಾರಿಯಾ ಕುಡಶೋವಾ ವಿರುದ್ಧ 7-6, 7-6ರಲ್ಲಿ ಗೆದ್ದರೆ, ಸಹಜ ಬ್ರಿಟನ್‌ನ ಯೂರಿಕೊ ಲಿಲಿ ವಿರುದ್ಧ 6-3, 3-6, 6-0ಯಲ್ಲಿ ಗೆದ್ದರು.

ಓಪನ್ ಬೆಂಗಳೂರು ಇನ್ಮುಂದೆ ಎಟಿಪಿ 125

ಬೆಂಗಳೂರು: ಫೆಬ್ರವರಿ 24ರಿಂದ ಇಲ್ಲಿನ ಕೆಎಸ್‌ಎಲ್‌ಟಿಎ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯು ಎಟಿಪಿ 125 ದರ್ಜೆಗೆ ಬಡ್ತಿ ಪಡೆದಿದೆ. ಇಷ್ಟು ದಿನ ಎಟಿಪಿ 100 ಟೂರ್ನಿ ಎನಿಸಿದ್ದ ಬೆಂಗಳೂರು ಓಪನ್‌ನಲ್ಲಿ ಈ ವರ್ಷದಿಂದ ಮತ್ತಷ್ಟು ಜನಪ್ರಿಯ ಟೆನಿಸಿಗರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಆಸ್ಟ್ರೇಲಿಯನ್ ಓಪನ್: ಆಲ್ಕರಜ್ ಮಣಿಸಿ 25ನೇ ಗ್ರಾನ್‌ಸ್ಲಾಂನತ್ತ ಜೋಕೋವಿಚ್ ದಾಪುಗಾಲು

ಇನ್ಮುಂದೆ ಇಲ್ಲಿ ಪ್ರಶಸ್ತಿ ಗೆಲ್ಲುವ ಆಟಗಾರನಿಗೆ 125 ಎಟಿಪಿ (ವಿಶ್ವ ರ್‍ಯಾಂಕಿಂಗ್‌) ಅಂಕಗಳು ಸಿಗಲಿವೆ. ಇನ್ನು, ಟೂರ್ನಿಯ ಪ್ರಶಸ್ತಿ ಮೊತ್ತವನ್ನು 2,00,000 ಅಮೆರಿಕನ್ ಡಾಲರ್ (1.72 ಕೋಟಿ ರು.)ಗೆ ಏರಿಸಲಾಗಿದ್ದು, ಚಾಂಪಿಯನ್ ಆಗುವ ಆಟಗಾರನಿಗೆ 28,400 ಡಾಲರ್ (24.53 ಲಕ್ಷರು.) ಸಿಗಲಿದೆ.