ಆಸ್ಟ್ರೇಲಿಯನ್ ಓಪನ್: ಸೆರೆನಾ ಔಟ್
ಪುರುಷರ ಸಿಂಗಲ್ಸ್‌ನಲ್ಲಿ ಸರ್ಬಿಯಾದ ಜೋಕೋವಿಚ್, ಕೇ ನಿಶಿಕೋರಿ ವಿರುದ್ಧ ಗೆದ್ದು ಸೆಮೀಸ್‌ಗೇರಿದರು. ರೋನಿಕ್ ಮಣಿಸಿದ ಲುಕಾಸ್ ಉಪಾಂತ್ಯಕ್ಕೇರಿದರು.
ಮೆಲ್ಬರ್ನ್[ಜ.24]: ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್‌ಸ್ಲಾಂನಲ್ಲಿ ಅಚ್ಚರಿಯ ಫಲಿತಾಂಶಗಳು ಹೊರಬೀಳುತ್ತಿವೆ.
ತಾರಾ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಕ್ವಾರ್ಟರ್‌ನಲ್ಲಿ ಮುಗ್ಗರಿಸಿದರು. ತಾಯಿಯಾದ ಬಳಿಕ ಮೊದಲ ಗ್ರ್ಯಾಂಡ್‌ಸ್ಲಾಂ ಜಯಿಸುವ ಗುರಿ ಹೊತ್ತು ಕಣಕ್ಕಿಳಿದಿದ್ದ ಸೆರೆನಾ, ಚೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ವಿರುದ್ಧ 4-6, 6-4, 5-7 ಸೆಟ್’ಗಳಲ್ಲಿ ಸೋತರು. ಪಂದ್ಯದ ವೇಳೆ ಸೆರೆನಾ ಹಿಮ್ಮಡಿ ನೋವಿಗೆ ತುತ್ತಾದರು. ಮತ್ತೊಂದು ಸೆಮೀಸ್‌ನಲ್ಲಿ ಜಪಾನ್‌ನ ಒಸಾಕ, ಉಕ್ರೇನ್‌ನ ಎಲಿನಾ ವಿರುದ್ಧ ಗೆದ್ದರು.
ಪುರುಷರ ಸಿಂಗಲ್ಸ್‌ನಲ್ಲಿ ಸರ್ಬಿಯಾದ ಜೋಕೋವಿಚ್, ಕೇ ನಿಶಿಕೋರಿ ವಿರುದ್ಧ ಗೆದ್ದು ಸೆಮೀಸ್‌ಗೇರಿದರು. ರೋನಿಕ್ ಮಣಿಸಿದ ಲುಕಾಸ್ ಉಪಾಂತ್ಯಕ್ಕೇರಿದರು.