ಪಂದ್ಯದುದ್ದಕ್ಕೂ ಬಲಿಷ್ಟ ಸರ್ವ್'ಗಳ ಮೂಲಕ ಜರ್ಮನಿಯ ಆಟಗಾರನನ್ನು ಕಂಗೆಡಿಸಿದ ಫೆಡರರ್ ಅರ್ಹವಾಗಿಯೇ ಸೆಮಿ-ಫೈನಲ್ ತಲುಪಿದ್ದಾರೆ.
ಮೆಲ್ಬೋರ್ನ್(ಜ.24): ಮಾಜಿ ನಂಬರ್ ಒನ್ ಆಟಗಾರ ರೋಜರ್ ಫೆಡರರ್ ಜರ್ಮನಿಯ ಮಿಶಾ ಜ್ವರೆವ್ ಅವರನ್ನು ಸೇರ ಸೆಟ್'ಗಳಲ್ಲಿ ಮಣಿಸುವ ಮೂಲಕ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಸುಮಾರು ಒಂದುವರೆ ತಾಸುಗಳ ಕಾಲ ನಡೆದ ಕಾದಾಟದಲ್ಲಿ ಫೆಡರರ್ 6-1, 7-5, 6-2 ನೇರ ಸೆಟ್'ಗಳಲ್ಲಿ 17ನೇ ಶ್ರೇಯಾಂಕದ ಆಟಗಾರನನ್ನು ಸೋಲಿಸುವಲ್ಲಿ ಸ್ವಿಸ್ ಆಟಗಾರ ಯಶಸ್ವಿಯಾದರು.
ಟೂರ್ನಿಯ ಅಗ್ರ ಶ್ರೇಯಾಂಕಿತ ಆಟಗಾರ ಆ್ಯಂಡಿ ಮರ್ರೆಗೆ ಸೋಲಿಸಿ ದಿಗ್ಬ್ರಮೆ ಮೂಡಿಸಿದ್ದ ಜ್ವರೆವ್, ಅದೇ ರೀತಿಯ ಅನಿರೀಕ್ಷಿತ ಫಲಿತಾಂಶ ನೀಡುವಲ್ಲಿ ವಿಫಲರಾದರು. ಪಂದ್ಯದುದ್ದಕ್ಕೂ ಬಲಿಷ್ಟ ಸರ್ವ್'ಗಳ ಮೂಲಕ ಜರ್ಮನಿಯ ಆಟಗಾರನನ್ನು ಕಂಗೆಡಿಸಿದ ಫೆಡರರ್ ಅರ್ಹವಾಗಿಯೇ ಸೆಮಿ-ಫೈನಲ್ ತಲುಪಿದ್ದಾರೆ.
ಇನ್ನು ಸೆಮಿಫೈನಲ್ ಪಂದ್ಯದಲ್ಲಿ ರೋಜರ್ ಫೆಡರರ್ ತಮ್ಮದೇ ದೇಶದ ಸ್ಟಾನ್ಲಿ ವಾವ್ರಿಂಕಾ ಅವರನ್ನು ಎದುರಿಸಲಿದ್ದಾರೆ.
