ಆಸ್ಟ್ರೇಲಿಯಾ ತಂಡವು ಬಾಂಗ್ಲಾದೇಶದ ವಿರುದ್ಧ 20 ರನ್'ಗಳ ರೋಚಕ ಸೋಲು ಕಂಡು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಮೆಲ್ಬೊರ್ನ್(ಸೆ.01): ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌'ನಲ್ಲಿ ಆಸ್ಟ್ರೇಲಿಯಾ ತಂಡ ಸೋಲನುಭವಿಸುತ್ತಿದ್ದಂತೆ, ಅದರ ವಿರುದ್ಧ ಆಸ್ಟ್ರೇಲಿಯಾದ ಮಾಧ್ಯಮಗಳು ಭಾರೀ ಟೀಕೆ ವ್ಯಕ್ತಪಡಿಸಿವೆ. ಆಟಗಾರರು ಪಡೆಯುತ್ತಿರುವ ವೇತನವನ್ನು ಗುರಿಯಾಗಿರಿಸಿಕೊಂಡು ವಾಗ್ದಾಳಿ ನಡೆಸಿವೆ.

ಆಸ್ಟ್ರೇಲಿಯಾ ಕ್ರಿಕೆಟ್ ಆಡಳಿತ ಸಮಿತಿ ಹಾಗೂ ಆಟಗಾರರು ನಡುವೆ ವೇತನ ಹಂಚಿಕೆ ಕುರಿತು ದೀರ್ಘ ಕಾಲದಿಂದ ನಡೆಯುತ್ತಿದ್ದ ಜಟಾಪಟಿ ಇತ್ತೀಚೆಗಷ್ಟೇ ಮುಕ್ತಾಯಗೊಂಡಿತ್ತು. ‘ಬಾಂಗ್ಲಾ ವಿರುದ್ಧ ಮೊದಲ ಸೋಲುನುಭವಿಸಿದ ಆಸ್ಟ್ರೇಲಿಯಾ ತಂಡದ 11 ಆಟಗಾರರು ವಾರಕ್ಕೆ ₹ 13 ಲಕ್ಷದಂತೆ ವರ್ಷಕ್ಕೆ ₹ 7 ಕೋಟಿ ಸಂಭಾವನೆ ಪಡೆಯುತ್ತಾರೆ. ವೇತನಕ್ಕಾಗಿ ಪ್ರತಿಭಟನೆ ನಡೆಸುವವರು ಅದಕ್ಕೆ ತಕ್ಕಂತೆ ಆಟವಾಡಬೇಕು’ ಎಂದು ದಿನಪತ್ರಿಕೆಯೊಂದು ಟೀಕಿಸಿದೆ.

ಆಸ್ಟ್ರೇಲಿಯಾ ತಂಡವು ಬಾಂಗ್ಲಾದೇಶದ ವಿರುದ್ಧ 20 ರನ್'ಗಳ ರೋಚಕ ಸೋಲು ಕಂಡು ವ್ಯಾಪಕ ಟೀಕೆಗೆ ಗುರಿಯಾಗಿದೆ.