ಲಂಡನ್[ಸೆ.13]: ಆ್ಯಷಸ್ ಟೆಸ್ಟ್ ಸರಣಿಯ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್’ನಲ್ಲಿ ಇಂಗ್ಲೆಂಡ್ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದೆ. ಮೊದಲ ದಿನದಂತ್ಯಕ್ಕೆ ಇಂಗ್ಲೆಂಡ್ 8 ವಿಕೆಟ್ ಕಳೆದು 271 ರನ್ ಬಾರಿಸಿದೆ.

ಆ್ಯಷಸ್ ಕದನ: ಇಂಗ್ಲೆಂಡ್ ವಿರುದ್ಧ ಗೆದ್ದ ಆಸ್ಟ್ರೇಲಿಯಾ

ಗುರುವಾರ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಇಂಗ್ಲೆಂಡ್ ತಂಡಕ್ಕೆ ಆಹ್ವಾನಿಸಿತು. ಆಸೀಸ್ ವೇಗಿಗಳನ್ನು ಎದುರಿಸಲು ಮತ್ತೊಮ್ಮೆ ಪರದಾಡಿದ ಆತಿಥೇಯರು 300 ರನ್’ಗಳೊಳಗಾಗಿ ಕುಸಿಯುವ ಭೀತಿಯಲ್ಲಿದ್ದಾರೆ. ಮಿಚೆಲ್ ಮಾರ್ಶ್ 4 ಹಾಗೂ ಪ್ಯಾಟ್ ಕಮಿನ್ಸ್ ಮತ್ತು ಜೋಸ್ ಹೇಜಲ್’ವುಡ್ ತಲಾ 2 ವಿಕೆಟ್ ಪಡೆದರು. 

ಆ್ಯಷಸ್ ಕದನ: ಸರಣಿ ಜಯದ ನಿರೀಕ್ಷೆಯಲ್ಲಿ ಆಸೀಸ್..!

ಈಗಾಗಲೇ ಆ್ಯಷಸ್ ಸರಣಿಯಲ್ಲಿ 1-2ರ ಹಿನ್ನಡೆಯಲ್ಲಿರುವ ಇಂಗ್ಲೆಂಡ್ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಇಂಗ್ಲೆಂಡ್ ಆರಂಭಿಕರಾದ ರೋರಿ ಬರ್ನ್ಸ್ ಹಾಗೋ ಜೋ ಡೆನ್ಲಿ ಮೊದಲ ವಿಕೆಟ್’ಗೆ ಕೇವಲ 27 ರನ್ ಕಲೆಹಾಕಿದರು.  ಬರ್ನ್ಸ್ 47 ರನ್ ಬಾರಿಸಿದರೆ, ನಾಯಕ ಜೋ ರೂಟ್[57] ಹಾಗೂ ಜೋಸ್ ಬಟ್ಲರ್[ಅಜೇಯ 64] ಅರ್ಧಶತಕ ಸಿಡಿಸುವ ಮೂಲಕ ಆಸೀಸ್ ದಾಳಿಗೆ ಪ್ರತಿರೋಧ ತೋರಿದರು.