ಟೂರ್ನಿ ಗೆಲ್ಲಲು ಆಸಿಸ್ ಅಂಡರ್ ಆರ್ಮ್ ಎಸೆತ - ವಿವಾದಕ್ಕೆ 38 ವರ್ಷ!
ಕ್ರಿಕೆಟ್‌ನಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಕೆಲವೊಮ್ಮೆ ವಿವಾದಗಳು ಸೃಷ್ಟಿಯಾಗುತ್ತೆ. ಇಂತಹ ದಾಖಲೆಗಳು, ಐತಿಹಾಸಿಕ ನಿಮಿಷಗಳು, ವಿವಾದಗಳನ್ನ ಮೆಲುಕು ಹಾಕುವ ವಿಶೇಷ ಪ್ರಯತ್ನವೇ ಕ್ರಿಕೆಟ್ ಸೀಕ್ರೆಟ್ಸ್. ಹಾಗಾದರೆ ಫೆಬ್ರವರಿ 01 ರ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.
ಬೆಂಗಳೂರು(ಫೆ.01): ಜಂಟ್ಲಮೆನ್ ಗೇಮ್ ಕ್ರಿಕೆಟ್ ವಿವಾದಗಳಿಂದ ಹೊರತಾಗಿಲ್ಲ. ಕೆಲ ಘಟನೆಗಳು ಕ್ರಿಕೆಟಿಗರನ್ನು ಮಾತ್ರವಲ್ಲ ಅಭಿಮಾನಿಗಳನ್ನು ತಲೆತೆಗ್ಗಿಸುವಂತೆ ಮಾಡಿದೆ. ಕ್ರೀಡಾ ಸ್ಪೂರ್ತಿ ಮರೆತು ಗೆಲುವಿಗಾಗಿ ಕ್ರಿಕೆಟಿಗರು ನಡೆದುಕೊಂಡ ರೀತಿ ಈಗಲೂ ಬೇಸರ ತರಿಸುತ್ತೆ. ಹೀಗೆ ಗೆಲುವಿಗಾಗಿ ಕ್ರೀಡಾ ಸ್ಪೂರ್ತಿ ಮರೆತ ಆಸ್ಟ್ರೇಲಿಯಾ ತಂಡದ ಅಂಡರ್ ಆರ್ಮ್ ಎಸೆತ ಇದಿಂಗೆ 38 ವರ್ಷ ಪೂರೈಸಿದೆ.
ಇದನ್ನೂ ಓದಿ: ಐಪಿಎಲ್ 2019: ಇಲ್ಲಿದೆ RCB ತಂಡದ ಬೆಸ್ಟ್ ಪ್ಲೇಯಿಂಗ್ ಇಲೆವೆನ್ !
ಅದು ಬೆನ್ಸೆನ್ ಅಂಡ್ ಹೆಡ್ಜೆಸ್ ವರ್ಲ್ಡ್ ಸೀರಿಸ್ ಕಪ್ . ಮೆಲ್ಬೋರ್ನ್‌ನಲ್ಲಿ ನಡೆದ 3ನೇ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ ಆತಿಥೇಯ ಆಸ್ಟ್ರೇಲಿಯಾ ಕ್ರೀಡಾ ಸ್ಪೂರ್ತಿ ಮರೆತು ಆಡಿ ಗೆಲುವು ದಾಖಲಿಸಿತು. ಇದು ಕ್ರಿಕೆಟ್ ಕ್ಷೇತ್ರಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 235ರನ್ ಸಿಡಿಸಿತ್ತು.
ಈ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ 49.5 ಓವರ್‌ಗಳಲ್ಲಿ 229 ರನ್ ಸಿಡಿಸಿತು. ಗೆಲುವಿಗೆ 7 ರನ್‌ಗಳ ಅವಶ್ಯಕತೆ ಇತ್ತು. ಆದರೆ ಕೇವಲ ಒಂದೇ ಎಸೆತ ಬಾಕಿ ಇತ್ತು. 8 ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲೆಂಡ್ ಸಿಕ್ಸರ್ ಸಿಡಿಸಿ ಪಂದ್ಯ ಟೈ ಮಾಡೋ ಲೆಕ್ಕಾಚಾರದಲ್ಲಿತ್ತು.
ಇದನ್ನೂ ಓದಿ:ಧೋನಿ ಪತ್ನಿ-ಕೊಹ್ಲಿ ಮಡದಿ ಇಬ್ಬರೂ ಕ್ಲಾಸ್‌ಮೇಟ್ಸ್!
ಬೌಲಿಂಗ್ ಮಾಡುತ್ತಿದ್ದ ಟ್ರೆವರ್ ಚಾಪೆಲ್ ಬಳಿ ಬಂದ ನಾಯಕ ಗ್ರೆಗ್ ಚಾಪೆಲ್ ಅಂಡರ್ ಆರ್ಮ್ ಬೌಲಿಂಗ್ ಮಾಡುವಂತೆ ಸೂಚಿಸಿದರು. ಸಹೋದರನ ಮಾತಿನಂತೆ ಟ್ರೆವರ್ ಅಂಡರ್ ಆರ್ಮ್ ಬೌಲಿಂಗ್ ಮಾಡಿದರು. ಈ ವೇಳೆ ಕ್ರೀಸ್‌ನಲ್ಲಿದ್ದ ಬ್ರೈನ್ ಮೆಕ್‌ನಿ ಡಿಫೆನ್ಸ್ ಮಾಡಿ ರೋಷದಿಂದ ಬ್ಯಾಟ್ ಎಸೆದರು. ಅಂಪೈರ್ ಈ ಎಸೆತವನ್ನ ಲೀಗಲ್ ಎಂದು ಘೋಷಿಸಿದರು.
ಆಸ್ಟ್ರೇಲಿಯಾ 6 ರನ್ ಗೆಲುವು ದಾಖಲಿಸಿತು. ಆದರೆ ಕ್ರೀಡಾಸ್ಪೂರ್ತಿ ಮರೆತ ಆಸ್ಟ್ರೇಲಿಯಾ ಕ್ರಿಕೆಟ್ ಜಗತ್ತಿನ ಮುಂದೆ ಬೆತ್ತಲಾಯಿತು. ಈ ಘಟನೆಗೆ ಪ್ರಮುಖ ಕಾರಣರಾದ ಗ್ರೆಗ್ ಚಾಪೆಲ್ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿಯೂ ಹಲವು ವಿವಾದಕ್ಕೆ ಕಾರಣರಾದರು.