ಇಂಗ್ಲೆಂಡ್ ಮೊದಲ ಇನಿಂಗ್ಸ್'ನಲ್ಲಿ 403 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಆಸ್ಟ್ರೇಲಿಯಾ 662/9 ರನ್ ಬಾರಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಇಂಗ್ಲೆಂಡ್ ಎರಡನೇ ಇನಿಂಗ್ಸ್'ನಲ್ಲಿ 218 ರನ್'ಗೆ ಸರ್ವಪತನ ಕಾಣುವ ಮೂಲಕ ಆ್ಯಷಸ್ ಟ್ರೋಫಿ ಕೈಚೆಲ್ಲಿತು.

ಪರ್ತ್(ಡಿ.18): ತವರಿನಲ್ಲಿ ನಡೆಯುತ್ತಿರುವ ಮೂರನೇ ಪಂದ್ಯದಲ್ಲೂ ಪರಾಕ್ರಮ ಮೆರೆದ ಆಸ್ಟ್ರೇಲಿಯಾ ಆ್ಯಷಸ್ ಟ್ರೋಫಿಯನ್ನು ಇನ್ನೆರಡು ಪಂದ್ಯ ಬಾಕಿಯಿರುವಾಗಲೇ ಕೈವಶ ಮಾಡಿಕೊಂಡಿದೆ.

ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್'ನಲ್ಲಿ ಇನಿಂಗ್ಸ್ ಹಾಗೂ 41 ರನ್'ಗಳ ಜಯಭೇರಿ ಬಾರಿಸಿದ ಸ್ಮಿತ್ ಪಡೆ 5 ಪಂದ್ಯಗಳ ಸರಣಿಯಲ್ಲಿ 3-0 ಅಂತರದಿಂದ ಆ್ಯಷಸ್ ಟ್ರೋಫಿ ಹಿಂಪಡೆದಿದೆ. ಹ್ಯಾಜೆಲ್'ವುಡ್ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಎರಡನೇ ಇನಿಂಗ್ಸ್'ನಲ್ಲಿ ಕೇವಲ 218 ರನ್'ಗಳಿಗೆ ಸರ್ವಪತನ ಕಂಡಿತು.

ಇಂಗ್ಲೆಂಡ್ ಮೊದಲ ಇನಿಂಗ್ಸ್'ನಲ್ಲಿ 403 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಆಸ್ಟ್ರೇಲಿಯಾ 662/9 ರನ್ ಬಾರಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಇಂಗ್ಲೆಂಡ್ ಎರಡನೇ ಇನಿಂಗ್ಸ್'ನಲ್ಲಿ 218 ರನ್'ಗೆ ಸರ್ವಪತನ ಕಾಣುವ ಮೂಲಕ ಆ್ಯಷಸ್ ಟ್ರೋಫಿ ಕೈಚೆಲ್ಲಿತು.

ಸಂಕ್ಷಿಪ್ತ ಸ್ಕೋರ್:

ಇಂಗ್ಲೆಂಡ್: 403& 218(ಮಲಾನ್: 54, ಹ್ಯಾಜಲ್'ವುಡ್: 48/5)

ಆಸ್ಟ್ರೇಲಿಯಾ: 662/9 ಡಿಕ್ಲೇರ್ (ಸ್ಟೀವ್ ಸ್ಮಿತ್: 239, ಆ್ಯಂಡರ್'ಸನ್: 116/4)