Asianet Suvarna News Asianet Suvarna News

ಆಸೀಸ್ ಕ್ರಿಕೆಟಿಗರ ಮೈಕ್ ಕಿತಾಪತಿ..! ಇದು ಕಾಂಗರೂ ಪಡೆಯ ಹೊಸ ಕಿತಾಪತಿ

ಆಸ್ಟ್ರೇಲಿಯನ್ನರು ಸ್ಟಂಪ್ ಮೈಕ್‌'ನಲ್ಲಿ ತಮ್ಮ ತಂಡದ ಪ್ರಾಯೋಜಕರ ಹೆಸರನ್ನು ಹೇಳುವ ಮೂಲಕ ಪಂದ್ಯ ಪ್ರಸಾರ ಸಂಸ್ಥೆಯನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನ ನಡೆಸುತ್ತಿದ್ದಾರೆ. ದ.ಆಫ್ರಿಕಾ ವಿರುದ್ಧ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ 2ನೇ ದಿನ ಆಸ್ಟ್ರೇಲಿಯಾ ವಿಕೆಟ್ ಕೀಪರ್ ಟಿಮ್ ಪೈನ್, ಸ್ಟಂಪ್ಸ್ ಹಿಂದೆ ನಿಂತು ತಮ್ಮ ತಂಡಕ್ಕೆ ಪ್ರಾಯೋಜಕತ್ವ ನೀಡುವ ಬಿಯರ್ ಹೆಸರನ್ನು ಜೋರಾಗಿ ಹೇಳಿದ್ದಾರೆ.

Australia Pulls Sponsors Stunt During South Africa Test
  • Facebook
  • Twitter
  • Whatsapp

ಡರ್ಬನ್(ಮಾ.04): ಆಸ್ಟ್ರೇಲಿಯಾ ಆಟಗಾರರು ಸ್ಲೆಡ್ಲಿಂಗ್‌'ಗೆ ಹೆಸರುವಾಸಿ. ಎದುರಾಳಿ ಆಟಗಾರರನ್ನು ಬಾಯಿಗೆ ಬಂದಂತೆ ನಿಂದಿಸುವುದರಲ್ಲಿ ಸದಾ ಮುಂದಿರುವ ಆಸ್ಟ್ರೇಲಿಯನ್ನರು, ಪಂದ್ಯದ ವೇಳೆ ಸ್ಟಂಪ್ ಮೈಕ್ ಸ್ಥಬ್ಧಗೊಳಿಸುವಂತೆ ಐಸಿಸಿಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ ಐಸಿಸಿ ಇದನ್ನು ಪುರಸ್ಕರಿಸಿಲ್ಲ.

ಇದಕ್ಕೆ ಪ್ರತಿಯಾಗಿ, ಆಸ್ಟ್ರೇಲಿಯನ್ನರು ಸ್ಟಂಪ್ ಮೈಕ್‌'ನಲ್ಲಿ ತಮ್ಮ ತಂಡದ ಪ್ರಾಯೋಜಕರ ಹೆಸರನ್ನು ಹೇಳುವ ಮೂಲಕ ಪಂದ್ಯ ಪ್ರಸಾರ ಸಂಸ್ಥೆಯನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನ ನಡೆಸುತ್ತಿದ್ದಾರೆ. ದ.ಆಫ್ರಿಕಾ ವಿರುದ್ಧ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ 2ನೇ ದಿನ ಆಸ್ಟ್ರೇಲಿಯಾ ವಿಕೆಟ್ ಕೀಪರ್ ಟಿಮ್ ಪೈನ್, ಸ್ಟಂಪ್ಸ್ ಹಿಂದೆ ನಿಂತು ತಮ್ಮ ತಂಡಕ್ಕೆ ಪ್ರಾಯೋಜಕತ್ವ ನೀಡುವ ಬಿಯರ್ ಹೆಸರನ್ನು ಜೋರಾಗಿ ಹೇಳಿದ್ದಾರೆ. ಇದೇ ವೇಳೆ ಮತ್ತೊಬ್ಬ ಆಟಗಾರ, ಅಂಪೈರ್ ಬಳಿ ತಮ್ಮ ತಂಡದ ಪ್ರಮುಖ ಪ್ರಾಯೋಜಕರಲ್ಲಿ ಒಂದಾದ ಕಾಂಟಾಸ್ ಏರ್‌'ವೇಸ್ ಹೇಗಿದೆ. ಸೌಕರ್ಯಗಳು ಉತ್ತಮವಾಗಿದೆ ಅಲ್ಲವೇ ಎಂದು ಕೇಳಿದ್ದಾರೆ.

ಈ ಬಗ್ಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಆಸ್ಟ್ರೇಲಿಯಾ ಸ್ಪಿನ್ನರ್ ನೇಥನ್ ಲಯನ್ ‘ಮೈದಾನದಲ್ಲಿ ನಡೆಯುವ ಸಂವಹನ ಮೈದಾನಕ್ಕೆ ಮಾತ್ರ ಸೀಮಿತವಾಗಿರಬೇಕು. ನಾವು ಮಾತನಾಡುವುದನ್ನು ಪ್ರೇಕ್ಷಕರಿಗೆ ಕೇಳಿಸುವ ಅಗತ್ಯವಾದರೂ ಏನಿದೆ. ಆಟದ ಭರದಲ್ಲಿ ಕೆಲ ಪದಗಳನ್ನು ಬಳಸಿರುತ್ತೇವೆ. ಇದು ನೋಡುಗರಿಗೆ ಮುಜುಗರ ಉಂಟು ಮಾಡಬಾರದು’ ಎಂದಿದ್ದರು. 2006ರಲ್ಲಿ ಆಸ್ಟ್ರೇಲಿಯಾದ ದಿಗ್ಗಜ ವಿಕೆಟ್ ಕೀಪರ್

ಆ್ಯಡಂ ಗಿಲ್‌ಕ್ರಿಸ್ಟ್ ಸಹ ಇದೇ ರೀತಿ ಪ್ರಸಂಗದಲ್ಲಿ ಭಾಗಿಯಾಗಿದ್ದರು. ತಂಡದ ಹಾಗೂ ತಮ್ಮ ವೈಯಕ್ತಿಕ ಪ್ರಾಯೋಜಕರಿಗೆ ಗಿಲ್‌'ಕ್ರಿಸ್ಟ್ ಪ್ರಚಾರ ನೀಡಿ ಸ್ಥಳೀಯ ಪ್ರಾಯೋಜಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಆಸ್ಟ್ರೇಲಿಯಾ ಆಟಗಾರರ ಈ ವರ್ತನೆಗೆ ಭಾರೀ ಟೀಕೆ ವ್ಯಕ್ತವಾಗಿದೆ.

 

Follow Us:
Download App:
  • android
  • ios