ಆಸೀಸ್ ಆಟಗಾರರು ಭಾರತದ ಸ್ಪಿನ್ ಬೌಲರ್‌'ಗಳನ್ನು ಎದುರಿಸಲು ನಿಜಕ್ಕೂ ಕಷ್ಟ ಪಡಲಿದ್ದಾರೆ. ಹೀಗಾಗಿ ಇದರ ಬಗ್ಗೆ ಹೆಚ್ಚು ಅಭ್ಯಾಸ ನಡೆಸಲಾಗಿದೆ ಎಂದರು.

ಮೆಲ್ಬೋರ್ನ್(ಜ.11): ಭಾರತದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಸ್ಪಿನ್ ಬೌಲಿಂಗ್ ಅತಿದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂದು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಗ್ಲೇನ್ ಮೆಗ್ರಾಥ್ ಹೇಳಿದ್ದಾರೆ.

ಆಸೀಸ್ ಆಟಗಾರರು ಭಾರತದ ಸ್ಪಿನ್ ಬೌಲರ್‌'ಗಳನ್ನು ಎದುರಿಸಲು ನಿಜಕ್ಕೂ ಕಷ್ಟ ಪಡಲಿದ್ದಾರೆ. ಹೀಗಾಗಿ ಇದರ ಬಗ್ಗೆ ಹೆಚ್ಚು ಅಭ್ಯಾಸ ನಡೆಸಲಾಗಿದೆ ಎಂದರು.

ಡಿಆರ್‌ಎಸ್ ವ್ಯವಸ್ಥೆ ಅಂಪೈರ್‌'ಗಳಿಗೆ ಅನುಕೂಲವಾಗಲಿದೆ ಎನ್ನುವ ಮೂಲಕ ಆರಂಭದಲ್ಲಿ ಈ ವಿಧಾನಕ್ಕೆ ಮೆಗ್ರಾಥ್ ಬೆಂಬಲ ವ್ಯಕ್ತಪಡಿಸಿದ್ದರು.

ಆದರೆ ಈಗ ರಾಗ ಬದಲಿಸಿರುವ ಆಸೀಸ್ ವೇಗಿ, ಬೌಲರ್‌ಗಳು ವಿಕೆಟ್ ತೆಗೆದಾಗ ತಂಡವೇ ಸಂತಸಪಡಲಿದೆ. ಡಿಆರ್‌'ಎಸ್‌'ನಲ್ಲಿ ಇದು ನಾಟೌಟ್ ಎಂದು ಫಲಿತಾಂಶ ಬಂದರೆ ಆಟಗಾರರಿಗೆ ನಿರಾಸೆ ಮೂಡಿಸಲಿದೆ ಎಂದು ಮೆಗ್ರಾಥ್ ಹೇಳಿದರು.